ರಕ್ತಚೆಲ್ಲುವ ಸಂಸ್ಕೃತಿಗಿಂತ ರಕ್ತದಾನಗೈಯುವ ಸಂಸ್ಕೃತಿ ರೂಡಿಯಾಗಲಿ- ಡಾl ರಾಜಾರಾಮ್

ರಕ್ತಚೆಲ್ಲುವ ಸಂಸ್ಕೃತಿಗಿಂತ ರಕ್ತದಾನಗೈಯುವ ಸಂಸ್ಕೃತಿ ರೂಡಿಯಾಗಲಿ- ಡಾl ರಾಜಾರಾಮ್
Facebook
Twitter
LinkedIn
WhatsApp

ಬೆಳ್ತಂಗಡಿ: ಬಿಸಿ ರಕ್ತದ ಯುವ ಜನತೆ ಯಾರದೋ ಮಾತಿಗೆ ಮರುಳಾಗಿ ರಕ್ತಚೆಲ್ಲುವ ಸಂಸ್ಕೃತಿಯ ಕಡೆ ಕಾಲಿಡದೆ ರಕ್ತದಾನಗೈಯುವ ಮೂಲಕ ದೇಶ ಸೇವೆಗೆ ಮುಂದಾಗಬೇಕು. ರಕ್ತದಾನ ಜೀವದಾನಕ್ಕೆ ಸಮಾನಾಗಿದ್ದು ಭ್ರಾತೃತ್ವವನ್ನು ಹತ್ತಿರಗೊಳಿಸುತ್ತದೆ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಡಾl ರಾಜಾರಾಮ್ ಕೆ. ಬಿ. ಹೇಳಿದರು. ಅವರು ಮೇ 28ರಂದು ಉಪ್ಪಿನಂಗಡಿಯ ಎಚ್. ಎಮ್. ಆಡಿಟೋರಿಯಂನಲ್ಲಿ ಸೌಹಾರ್ದ ಸಮಿತಿ (ರಿ) ಇಳಂತಿಲ ಇದರ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಮತ್ತು ಬ್ಲಡ್ ಡೋನರ್ಸ್ (ರಿ) ಮಂಗಳೂರು ಇವರ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಭಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿದ್ದ ಇಳಂತಿಲ ಗ್ರಾಮ ಪಂಚಾಯತ್ ಅದ್ಯಕ್ಷೆ ಚಂದ್ರಿಕಾ ಭಟ್ ಮಾತನಾಡುತ್ತಾ, ಕೊರೋನಾದ ಈ ಸಂಕಷ್ಟದ ಸಮಯದಲ್ಲಿ ಜನ ರಕ್ತದಾನಗೈಯಲು ಹಿಂದೆ ಮುಂದೆ ನೋಡುತ್ತಿದ್ದು ಹೀಗಿದ್ದರೂ ಇಲ್ಲಿನ ಯುವಕರು ರಕ್ತದಾನಗೈಯಲು ಮುಂದಾಗಿರುವುದು ಶ್ಲಾಘನೀಯ ಎಂದರು. ಸೌಹಾರ್ದ ಸಮಿತಿ ಅಧ್ಯಕ್ಷ ನ್ಯಾಯವಾದಿ ಮನೋಹರ ಕುಮಾರ್ ಅದ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ SKSSF ವಿಕಾಯದ ಜಿಲ್ಲಾ ಚೇರ್ಮನ್ ಇಸ್ಮಾಯಿಲ್ ತಂಗಳ್, ಉಪ್ಪಿಂಗಡಿ ಜುಮಾ ಮಸೀದಿಯ ಅದ್ಯಕ್ಷರಾದ ಮುಸ್ತಾಫ, ಕೆಂಪಿ, ಉಪ್ಪಿನಂಗಡಿ ಚರ್ಚ್ ಉಪಾದ್ಯಕ್ಷರಾದ ನವೀನ್ ಬ್ರಾಗ್ಸ್, ಎನ್ಮಾಡಿ, ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಅದ್ಯಕ್ಷರಾದ ಕೆ. ವಿ. ಪ್ರಸಾದ್, ಜೋಗಿಬೆಟ್ಟು ಮಸೀದಿ ಅದ್ಯಕ್ಷರಾದ ಝಕಾರಿಯಾ ಅಗ್ನಾಡಿ, ಸಹಾಯ್ ಉಪ್ಪಿನಂಗಡಿ ಸೆಕ್ಷನ್‌ನ ಪ್ರಮುಖರಾದ ಅಬ್ದುಲ್ ಲತೀಪ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೃಷ್ಣಯ್ಯ ಆಚಾರ್ಯ, ಇಳಂತಿಲ ಗ್ರಾಮ ಪಂಚಾಯತ್ ಸದಸ್ಯರುಗಳಾದ ಯು. ಕೆ. ಇಸುಬು, ವಸಂತ ಶೆಟ್ಟಿ, ತಣ್ಣೀರುಪಂಥ ಗ್ರಾಮ ಪಂಚಾಯತ್ ಸದಸ್ಯ ಜಯವಿಕ್ರಮ್ ಕಲ್ಲಾಪು, ಉಪಾಧ್ಯಕ್ಷ ಆಯೂಬ್ ಡಿ. ಕೆ., ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಯು. ಟಿ. ಫಯಾಜ್ ಅಹಮದ್, ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಅದ್ಯಕ್ಷರಾದ ಹರಿದಾಸ್ ಎಸ್. ಎಂ, ಇಳಂತಿಲ ಕಾಂಗ್ರೆಸ್ ಸಮಿತಿ ಅದ್ಯಕ್ಷರಾದ ಜನಾರ್ಧನ ಪೂಜಾರಿ, ಸೌಹಾರ್ದ ಸಮಿತಿ ಪ್ರದಾನ ಕಾರ್ಯದರ್ಶಿ ಅಶ್ವಿರ್ ಯು. ಟಿ. ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ದಿನಸಿ ಸಾಮಾಗ್ರಿಗಳ ಕಿಟ್ ಮತ್ತು ಗ್ರಾಮ ಪಂಚಾಯತ್ ಕೊರೋನಾ ಟಾಸ್ಕ್‌ಫೋರ್ಸ್ ಸಮಿತಿಗೆ ಸೌಹಾರ್ದ ಸಮಿತಿ ವತಿಯಿಂದ ವಿಟಾಮಿನ್ ಸಿ ಮಾತ್ರೆ ಖರೀದಿ ಬಗ್ಗೆ ಧನ ಸಹಾಯ ನೀಡಲಾಯಿತು. ಇಳಂತಿಲ ಗ್ರಾಮ ಪಂಚಾಯತ್ ಸದಸ್ಯ ಯು. ಕೆ. ಇಸುಬು ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ವಂದಿಸಿದರು. ಬೆಳ್ತಂಗಡಿ ವಕೀಲರ ಸಂಘದ ಮಾಜಿ ಅದ್ಯಕ್ಷರಾದ ಶಿವ ಕುಮಾರ್ ಎಸ್. ಎಂ. ಕಾರ್ಯಕ್ರಮ ನಿರೂಪಿಸಿದರು.

Latest News

Related Posts