ಗುರುವಾಯನಕೆರೆ ಸೊಸೈಟಿಯ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಗುರುವಾಯನಕೆರೆ ಸೊಸೈಟಿಯ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
Facebook
Twitter
LinkedIn
WhatsApp

ಬೆಳ್ತಂಗಡಿ: ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 30ವರ್ಷಗಳ ಕಾಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ, ಸಂಘದ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕ ದುಡಿಮೆ ಸಲ್ಲಿಸಿ ಮೇ 31ರಂದು ವಯೋ ನಿವೃತ್ತರಾದ ಅನಂತ್ರಾಜ್ ಜೈನ್‌ರವರ ಬೀಳ್ಕೊಡುಗೆ ಸಮಾರಂಭವು ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸಿ, ಸರಳವಾಗಿ ಸಂಘದ ಸಭಾಭವನದಲ್ಲಿ ಮೇ 31ರಂದು ನಡೆಯಿತು.ಅತ್ಯಂತ ಹೃದಯಸ್ಪರ್ಶಿಯಾಗಿ ನಡೆದ ಈ ವಿದಾಯ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಜಿ. ಭಗೀರಥ ಮತ್ತು ಉಪಾಧ್ಯಕ್ಷೆ ಸುಜಿತಾ ವಿ. ಬಂಗೇರ ನಿವೃತ್ತಿ ಹೊಂದಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಶಾಲು ಹೊದಿಸಿ, ಹಾರ ಹಾಕಿ, ಚಿನ್ನದ ಪದಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಿ; ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು‌. ಇದೇ ಕಾರ್ಯಕ್ರಮದಲ್ಲಿ ಸಂಘದ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹಿರಿಯ ಗುಮಾಸ್ತೆ ರವಿಕಲಾ ಅಧಿಕಾರ ಸ್ವೀಕರಿಸಿದರು.ಈ ಸಂದರ್ಭ ಸಂಘದ ನಿರ್ದೇಶಕರಾದ ಗೋಪಿನಾಥ್ ನಾಯಕ್, ಮುಗುಳಿ ನಾರಾಯಣ ರಾವ್, ವಡಿವೇಲು, ಪುರಂದರ ಶೆಟ್ಟಿ, ಭುಜಂಗ ಕೆ. ಶೆಟ್ಟಿ, ಸಚಿನ್ ಕುಮಾರ್ ನೂಜೋಡಿ, ಹರಿಶ್ಚಂದ್ರ, ಚಂದ್ರರಾಜ್, ಶಾರದಾ, ರಾಜು, ಡಿಸಿಸಿ ಬ್ಯಾಂಕ್ ಬೆಳ್ತಂಗಡಿ ಶಾಖಾ ಪ್ರಬಂಧಕ ಮಹೇಶ್, ಗುರುವಾಯನಕೆರೆ ಶಾಖಾ ಪ್ರಬಂಧಕ ಸಂತೋಷ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ಧೀನ್, ಸಂಘದ ಸಿಬ್ಬಂದಿಗಳಾದ ಚಂದ್ರಹಾಸ ಶೆಟ್ಟಿ, ಮಮತಾ, ಚೇತನ್ ಕುಮಾರಿ, ಯಶೋಧಾ, ಭಾಗ್ಯಶ್ರೀ, ಪಿಗ್ಮಿ ಸಂಗ್ರಾಹಕರು ಉಪಸ್ಥಿತರಿದ್ದರು.

Latest News

Related Posts