ಬೆಳ್ತಂಗಡಿ: ಖಚಿತ ಮಾಹಿತಿಯ ಮೇರೆಗೆ ಜೂನ್ 1ರ ಬೆಳಿಗ್ಗೆ ಗರ್ಡಾಡಿ ಗ್ರಾಮದ ಕಾಣೇಲು ನಿವಾಸಿ ಭೋಜ ಎಂಬವರ ಮನೆಯಲ್ಲಿನ ಅಕ್ರಮ ಮದ್ಯ ಮಾರಾಟದ ಅಡ್ಡೆಗೆ ತನ್ನ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ ಪುಂಜಾಲಕಟ್ಟೆ ಪೊಲೀಸ್ ಠಾಣಾ ಸಬ್ಇನ್ಸ್ಪೆಕ್ಟರ್ ಜೆ. ಸೌಮ್ಯಾ; ಮಾರಾಟದ ಉದ್ಧೇಶಕ್ಕಾಗಿ ಅಕ್ರಮವಾಗಿ ದಾಸ್ತಾನಿರಿಸಿದ ರೂಪಾಯಿ 42,356/- ಅಂದಾಜು ಮೌಲ್ಯದ 58.68ಲೀಟರ್ ಮದ್ಯ ಹಾಗೂ ರೂಪಾಯಿ 14,125/- ಅಂದಾಜು ಮೌಲ್ಯದ 82.53ಲೀಟರ್ ಬಿಯರ್ನ್ನು ಸ್ವಾದೀನ ಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






