ಬೆಳ್ತಂಗಡಿ: ಬೆಳಗಾವಿಯ ಕಸ್ತೂರಿ ಕನ್ನಡ ಸಿರಿಗನ್ನಡ ವೇದಿಕೆಯು ಬೆಳ್ತಂಗಡಿ ತಾಲೂಕು ಮುಂಡಾಜೆಯ ವಿದ್ಯಾಶ್ರೀ ಅಡೂರ್‌ರವರನ್ನು ರಾಜ್ಯ ಮಟ್ಟದ ‘ಕವಿ ವಿಭೂಷಣ’ ಪ್ರಶಸ್ತಿ ನೀಡಿ ಪುರಸ್ಕರಿಸಲು ಆಯ್ಕೆ ಮಾಡಿದೆ.ವಿದ್ಯಾಶ್ರೀ ಅಡೂರ್‌ರವರು ಕನ್ನಡ ಸಾಹಿತ್ಯ, ಭಾಷೆ, ನೆಲ-ಜಲ, ಸಂಸ್ಕೃತಿ ಸಹಿತ ಸಿರಿಗನ್ನಡ ಕ್ಷೇತ್ರಕ್ಕೆ ನೀಡಿದ ಗಣನೀಯ ಸೇವೆ ಹಾಗೂ ಸಾಧನೆಯನ್ನು ಗುರುತಿಸಿದ ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ವಿದ್ಯಾಶ್ರೀ ಅಡೂರ್‌ರವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜೂನ್ 5ರಂದು ಅಂತರ್ಜಾಲದ ಮೂಲಕ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ವಿದ್ಯಾಶ್ರೀ ಅಡೂರ್‌ರವರಿಗೆ ನೀಡಿ ಗೌರವಿಸಲಾಗುವುದು.






