ಬೆಳ್ತಂಗಡಿ: ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಲಾಯಿಲ ಗ್ರಾಮದ ಪಡ್ಲಾಡಿಯ ಸೀಲ್‌ಡೌನ್ ಆಗಿರುವ ಮನೆಗಳಿಗೆ ಹಾಗೂ ಇತರ ಪಾಸಿಟಿವ್ ಪ್ರಕರಣಗಳಿರುವ ಮನೆಗಳಿಗೆ ಆಹಾರ ಕಿಟ್ಟನ್ನು ಬೆಳ್ತಂಗಡಿ ಚರ್ಚ್ ಧರ್ಮಗುರುಗಳು ನೀಡಿದರು.ಬೆಳ್ತಂಗಡಿ ಕ್ಯಾಥೋಲಿಕ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಜೋಸೆಫ್ ಆಲ್ಫೋನ್ಸ್ ಕಾರ್ಡೊಜ ಅವರು ವೈಯಕ್ತಿಕ ನೆಲೆಯಲ್ಲಿ ಪಡ್ಲಾಡಿ ವಿಲಿಯಂ ವೇಗಸ್ ಮನವಿಗೆ ಸ್ಪಂದಿಸಿ ಕೊರೊನಾ ಪಾಸಿಟಿವ್ ಇರುವ ಸುಮಾರು 20 ಕುಟುಂಬಗಳಿಗೆ ಆಹಾರದ ಕಿಟ್ ನೀಡಿದರು. ಸಂಕಷ್ಟದ ಸಂದರ್ಭದಲ್ಲಿ ಅಶಕ್ತರಿಗೆ ಕಿಟ್ ನೀಡಿ ಸಹಕರಿಸಿದ ಚರ್ಚ್‌ನ ಧರ್ಮಗುರುಗಳಿಗೆ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ವಾರ್ಡಿನ ಪರವಾಗಿ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಲಿಯಂ ವೇಗಸ್ ಹಾಗೂ ಕೋವಿಡ್ ಕಾರ್ಯಪಡೆಯ ಸದಸ್ಯ ಅನಿಲ್ ವಿಕ್ರಂ ಡಿಸೋಜಾ, ವೀರೇಶ್ ವೇಗಸ್, ಕ್ಲಿಂಟನ್, ಉಪಸ್ಥಿತರಿದ್ದು ಕಿಟ್ ವಿತರಿಸಲು ಸಹಕರಿಸಿದರು.






