ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ( ರಿ.) ಸುಳ್ಯ ಇದರ ಆಶ್ರಯದಲ್ಲಿ ಸಾಮಾಜಿಕ ಜಾಗೃತಿಯ ಒಂದು ಕಿರುಚಿತ್ರ ನಿರ್ಮಾಣಗೊಳ್ಳಲಿದೆ. ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯ ಶುಭಹಾರೈಸಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ರಂಗನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ರಂಗಮನೆ ಸುತ್ತಲಿನ ಪರಿಸರದಲ್ಲಿ ಚಿತ್ರೀಕರಣ ಆರಂಭಗೊಂಡಿತು. ಮಾ| ಮನುಜ ನೇಹಿಗ,ಕು| ಲಾಲಿತ್ಯ ಹಾಗೂ ಜೀವನ್ ರಾಂ ಸುಳ್ಯ ಪ್ರಧಾನವಾಗಿ ಅಭಿನಯಿಸುವ ಈ ಕಿರುಚಿತ್ರದ ಕ್ಯಾಮರಾ ಝೀಟೋಗ್ರಫಿಯ ಝೀಶನ್,ಸಹ ನಿರ್ದೇಶನ ಹರ್ಷಿತ್ ಕೆ, ತಾಂತ್ರಿಕವಾಗಿ ಉಪನ್ಯಾಸಕರಾದ ಕುಸುಮಾಧರ ಸಂಕಡ್ಕ ಮತ್ತು ರವೀಶ್ ಪಡ್ಡಂಬೈಲ್ ಸಹಕರಿಸುತ್ತಿದ್ದಾರೆ.






