ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿರುವ ಕೊರೋನಾ ಸೋಂಕಿತರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಯವರು ರಜತಾದ್ರಿ ವಸತಿಗೃಹದಲ್ಲಿ 300 ಕೊಠಡಿಗಳ 600 ಬೆಡ್ ಇರುವಂತಹ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ಅವಕಾಶ ಕಲ್ಪಿಸಿರುತ್ತಾರೆ.ಸದ್ರಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಪ್ರಸ್ತುತ 106 ಪುರುಷರು,72 ಮಹಿಳೆಯರು ಒಟ್ಟು 178 ಮಂದಿ ಸೋಂಕಿತರಿಗೆ ಸಕಲ ಸೌಕರ್ಯಗಳೊಂದಿಗೆ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತಿದೆ.ಪ್ರತಿದಿನ ಶ್ರೀ ಕ್ಷೇತ್ರದಿಂದ ಬೆಳಗ್ಗಿನ ಉಪಹಾರ, 11ಗಂಟೆಗೆ ಕಷಾಯ-ಬಿಸ್ಕೆಟ್, ಮದ್ಯಾಹ್ನ ಊಟ, ಸಂಜೆ ಕಾಫಿ/ಟೀ,/ಕಷಾಯದ ಜೊತೆಗೆ ತಿಂಡಿ ತಿನಿಸು, ರಾತ್ರಿ ಊಟದ ವ್ಯವಸ್ಥೆ ಮತ್ತು ಊಟ ಮಾಡದವರಿಗೆ ಉಪಹಾರದ ವ್ಯವಸ್ಥೆ ಹಾಗೂ ಅಗತ್ಯ ವಸ್ತ್ರಗಳನ್ನು ಸಿರಿ ಸಂಸ್ಥೆಯ ಮೂಲಕ ಧರ್ಮಾಧಿಕಾರಿಯವರು ನೀಡಿ ಈ ಕೋವಿಡ್ ಸಂಕಷ್ಟದಲ್ಲಿ ಸೋಂಕಿತರಿಗೆ ನೆರವಾಗುತ್ತಿದ್ದಾರೆ.*ಜಿಲ್ಲಾಧಿಕಾರಿಯವರ ಮೆಚ್ಚುಗೆ:* ರಜತಾದ್ರಿ ಕೋವಿಡ್ ಕೇರ್ ಸೆಂಟರ್ಗೆ ಜಿಲ್ಲಾಧಿಕಾರಿಯವರು ಬೇಟಿ ನೀಡಿ ಅಲ್ಲಿನ ವ್ಯವಸ್ಥೆ, ಸ್ವಚ್ಛತೆ, ಕೊರೋನಾ ವಾರಿಯರ್ಸ್ರ ನಿರಂತರ ಸೇವೆ ಹಾಗೂ ಶ್ರೀ ಕ್ಷೇತ್ರದ ಧರ್ಮಾಧಿಕಾರಿಯವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.*ನೂಡಲ್ ಅಧಿಕಾರಿ ಡಾ. ಜಯಕೀರ್ತಿ ಜೈನ್* ರಜೆಯಲ್ಲಿದ್ದರೂ ತಾಲ್ಲೂಕು ದಂಡಾಧಿಕಾರಿಯವರ ವಿನಂತಿಯ ಮೇರೆಗೆ ರಜೆಯನ್ನು ನಿಸ್ವಾರ್ಥ ಸೇವೆ ಹಿಂದಕ್ಕೆ ಪಡೆದು ಕರ್ತವ್ಯಕ್ಕೆ ಹಾಜರಾದ ಡಾ. ಜಯಕೀರ್ತಿ ಜೈನ್ ತಕ್ಷಣ ವೈದ್ಯಧಿಕಾರಿಗಳು, ದಾದಿಯರು, ಸ್ವಯಂ ಸೇವಕರು, ಗ್ರಾಮ ಪಂಚಾಯತ್ ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಧರ್ಮಾಧಿಕಾರಿಗಳ ಹಾಗೂ ಹರ್ಷೇಂದ್ರ ಕುಮಾರ್ ಮತ್ತು ಶಾಸಕ ಹರೀಶ್ ಪೂಂಜರ ಮಾರ್ಗದರ್ಶನದೊಂದಿಗೆ ಕೊರೊನ ಸೋಂಕಿತರಿಗೆ ಮನೆಯ ವಾತಾವರಣ ಬರುವಂತೆ ಆರೈಕೆ ಮಾಡುತ್ತಿರುವುದು ಸರಕಾರಿ ಅಧಿಕಾರಿಗಳಿಗೆ ಮಾದರಿ ಎಂಬುದು ಸ್ಥಳೀಯರ ಅಭಿಪ್ರಾಯ.ಇದರೊಂದಿಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ವಿಶೇಷ ಮುತುವರ್ಜಿಯಿಂದ ದಿನಬಳಕೆಯ ವಸ್ತುಗಳಾದ ಪೇಸ್ಟ್, ಸಾಬೂನು, ಬ್ರೇಷ್, ಬಾಚಾಣಿಗೆ, ತೆಂಗಿನ ಎಣ್ಣೆ, ಸ್ಯಾನಿಟೈಸರ್, ಮಾಸ್ಕ್ ನೀಡಿ ಕೊರೋನಾ ನಿರ್ಮೂಲನೆ ಮಾಡುವಲ್ಲಿ ‘ಪರೋಪಕಾರಂ ಇದ ಮಿತ್ತಂ’ ಅನ್ನುವ ಮನೊ ಸಂಕಲ್ಪದೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಉಳಿದವರಿಗೆ ಮಾದರಿಯಾಗಿದ್ದಾರೆ.*ವಿಪತ್ತು ನಿರ್ವಹಣೆಯ ಸಾತ್:* ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣೆಯ 10 ಮಂದಿ ಸದಸ್ಯರು ಸೋಂಕಿತರ ಆರೈಕೆಯಲ್ಲಿ ದಿನದ 24 ಗಂಟೆಯೂ ತಮ್ಮನ್ನು ತೊಡಗಿಕೊಂಡಿದ್ದಾರೆ.*ಪಂಚಾಯತ್ ಟಾಸ್ಕ್ ಪೋರ್ಸ್ ಕಾರ್ಯಾಚರಣೆ:* ದಿನವಿಡಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷ ಶ್ರೀನಿವಾಸ ರಾವ್ರವರ ವಿಷೇಶ ಕಾಳಜಿ, ಅಭಿವೃದ್ಧಿ ಆದಿಕಾರಿ ಉಮೇಶ್ ಕೆ., ಪಂಚಾಯತ್ ಟಾಸ್ಕ್ ಪೋರ್ಸ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಸೋಂಕಿತರ ಆರೈಕೆಯಲ್ಲಿ ತೊಡಗಿಕೊಂಡು ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.*ವೈದ್ಯರ ನಿರಂತರ ಸೇವೆ:* 3 ಜನ ನುರಿತ ಸರಕಾರಿ ವೈದ್ಯಾಧಿಕಾರಿಗಳು, ಹಾಗೂ ಒಬ್ಬರು ಸರಕಾರಿ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಒಬ್ಬರು ಎರಡು ಜನ ದಾದಿಯರು ಹಾಗೂ ಸಿಯಾನ್ ಆಶ್ರಮದ 10ಜನ ದಾದಿಯರು ಮತ್ತು ಸೇವಕರು ನಿರಂತರ ಸೇವೆ ನೀಡುತ್ತಿದ್ದಾರೆ.*ದೈನಂದಿನ ಸ್ವಚ್ಛತೆ:* ದಿನಂಪ್ರತಿ ಬಳಕೆ ಮಾಡಿದ ವಸ್ತುಗಳಾದ ಊಟದ ಹಾಳೆತಟ್ಟೆ, ಲೋಟ, ಇತರೇ ವಸ್ತುಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಿ ಸ್ವಚ್ಛತೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ.







