ಬೆಳ್ತಂಗಡಿ: ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ಬಳಿ ವ್ಯಕ್ತಿಯೋರ್ವ ಫಿಡ್ಸ್ ಪೀಡಿತನಾಗಿ ಬಳಲುತ್ತಿದ್ದ. ಯಾರೂ ಸಂಬಂಧಿಕರಿಲ್ಲದ ಕಾರಣ ಸಹಾಯಕ್ಕೆ ಯಾರೂ ದೊರೆಯದೆ, ಬಿದ್ದಾಗ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಅಪಾಯದಲ್ಲಿದ್ದರು. ಕೂಡಲೇ ಅಲ್ಲೇ ಸಮೀಪದಲ್ಲಿ ಸಾಗುತ್ತಿದ್ದ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು ಇದನ್ನು ಗಮನಿಸಿ ಸಹಾಯಕ್ಕೆ ಧಾವಿಸಿದರು. ಪ್ರಾಥಮಿಕ ಚಿಕಿತ್ಸೆಯ ಬಳಿಕ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ಆಕಾಶ್ ಅವರನ್ನು ಸಂಪರ್ಕಿಸಿ ಅವರ ಸಲಹೆಯ ಮೇರೆಗೆ ಆ್ಯಂಬುಲೆನ್ಸ್ ಮುಖಾಂತರ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದರು.ಧರ್ಮಸ್ಥಳ ವಲಯದ ಸ್ವಯಂಸೇವಕರಾದ ಪೃಥ್ವೀಶ್ ಧರ್ಮಸ್ಥಳ, ಸ್ನೇಕ್ ಪ್ರಕಾಶ್, ಬೆಳಾಲು ವಲಯದ ಸ್ವಯಂಸೇವಕ ಸಂತೋಷ್, ಉಜಿರೆ ವಲಯದ ಸ್ವಯಂಸೇವಕ ರವೀಂದ್ರ ಹಾಗೂ ಸ್ಥಳೀಯರ ಸಮಯಪ್ರಜ್ಞೆಯಿಂದ ವ್ಯಕ್ತಿಯ ಜೀವ ಉಳಿದಿದೆ.ವರದಿ: ಸ್ವಸ್ತಿಕ್, ಕನ್ಯಾಡಿ.






