ಯುವ ಬಂಟರ ಸಂಘದಿಂದ ಆಹಾರದ ಕಿಟ್ ವಿತರಣೆ

ಯುವ ಬಂಟರ ಸಂಘದಿಂದ ಆಹಾರದ ಕಿಟ್ ವಿತರಣೆ
Facebook
Twitter
LinkedIn
WhatsApp

ಮೂಡುಬಿದಿರೆ : ಮೂಡುಬಿದಿರೆ ತಾಲೂಕು ಯುವ ಬಂಟರ ಸಃಘದ ವತಿಯಿಂದ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ತೀರಾ ಸಂಕಷ್ಟದಲ್ಲಿರುವ ಬಂಟರ ಸಮಾಜದ ಆಯ್ದ 90 ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮವು ಇಲ್ಲಿನ ಸಮಾಜ ಮಂದಿರ ಸಭಾಭವನದಲ್ಲಿ ನೆರವೇರಿತು.ಆಹಾರದ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಥಾನದ ಅಧ್ಯಕ್ಷ ಡಾ। ಎಂ. ಮೋಹನ ಆಳ್ವ ಅವರು ಸಮಾಜದಲ್ಲಿ ಅಕ್ಷರಾಭ್ಯಾಸ ಇಲ್ಲದವರು, ತೀರಾ ಸಂಕಷ್ಟದಲ್ಲಿರುವ ಜನರು ಇಂದಿಗೂ ಇದ್ದಾರೆ. ಸಮಾಜದಲ್ಲಿ ಸ್ಥಿತಿವಂತರೆಂದು ಗುರುತಿಸಿಕೊಂಡವರು ತಮ್ಮಲ್ಲಿರುವ ಸಂಪತ್ತಿನ ಒಂದಿಷ್ಟು ಭಾಗವನ್ನಾದರೂ ಸಂಕಷ್ಟದಲ್ಲಿರುವ ತಮ್ಮದೇ ಸಮುದಾಯದ ಜನರಿಗೂ ಹಂಚುವುದು ದೇವರು ಮೆಚ್ಚುವ ಕೆಲಸವಾಗಿದೆ. ಇತಿಹಾಸದಲ್ಲಿ ಬಂಟ ಸಮಾಜದವರನ್ನು ಧೈರ್ಯವಂತರು ಮತ್ತು ಯೋಧರೆಂದು ಗುರುತಿಸಲಾಗಿದೆ. ಬಂಟರು ಯಾವತ್ತಿಗೂ ಧೃತಿಗೆಡುವ ಜಾಯಮಾನದವರಲ್ಲ. ತಮ್ಮ ರಕ್ತದಲ್ಲಿರುವ ಧೈರ್ಯದ ಶಕ್ತಿಯನ್ನು ಬಳಸಿಕೊಂಡು ಸಮಾಜದಲ್ಲಿ ಕಷ್ಟದಲ್ಲಿರುವವರ ಸಹಾಯಕ್ಕೆ ನಿಲ್ಲುವ ಮೂಲಕ ತಮ್ಮ ವೈಯಕ್ತಿಕ ಬದುಕಿನ ಜೊತೆಗೆ ಅತೀ ಶೀಘ್ರದಲ್ಲಿ ದೇಶವನ್ನು ಮತ್ತೆ ಕಟ್ಟುವ ಕೆಲಸಕ್ಕೆ ಬಂಟ ಸಮಾಜದ ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ ಅವರು ಮಾತನಾಡಿ ಕಷ್ಟದಲ್ಲಿರುವ ಸಮಾಜ ಬಾಂಧವರನ್ನು ಗುರುತಿಸಿ ಸಹಾಯ ಮಾಡುವುದು ಶ್ರೇಷ್ಠ ಕೆಲಸವಾಗಿದೆ ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ತೋಡಾರು ದಿವಾಕರ ಶೆಟ್ಟಿ ಅವರು ಮಾತನಾಡಿ ಯುವ ಬಂಟರ ಸಂಘದ ಯುವ ನಾಯಕರು ತಮ್ಮ ಸೇವೆಯನ್ನು ಬಂಟ ಸಮಾಜಕ್ಕೆ ಮಾತ್ರ ಸೀಮಿತಗೊಳಿಸದೆ ಎಲ್ಲರೊಂದಿಗೂ ಬೆರೆತು ಕೆಲಸಮಾಡುವ ಆದರ್ಶವನ್ನು ಬೆಳೆಸಿಕೊಳ್ಳಬೇಕು. ಬಂಟ ಸಮಾಜದ ನಾಯಕರಾಗಿದ್ದ ಮಾಜಿ ಸಚಿವ ದಿ. ಅಮರನಾಥ ಶೆಟ್ಟಿಯವರು ಮೂಡುಬಿದಿರೆಯಲ್ಲೊಂದು ಬಂಟರ ಭವನವನ್ನು ನಿರ್ಮಿಸಿ ಅದನ್ನು ಎಲ್ಲಾ ಸಮಾಜದವರಿಗೂ ಉಪಯೋಗಕ್ಕೆ ನೀಡಬೇಕು ಎಂಬ ದೊಡ್ಡ ಕನಸನ್ನು ಇಟ್ಟುಕೊಂಡಿದ್ದರು. ಈ ಕನಸನ್ನು ನನಸಾಗಿಸುವ ಕಾರ್ಯಕ್ಕೆ ಬಂಟ ಸಮಾಜದ ಸರ್ವರೂ ಕೈ ಜೋಡಿಸಬೇಕು ಎಂದು ವಿನಂತಿಸಿದರು. ನ್ಯಾಯವಾದಿ ಶರತ್ ಶೆಟ್ಟಿ ಮಾತನಾಡಿದರು. ಆಲಂಗಾರು ನಿಧಿ ಕನ್ ಸ್ಟ್ರಕ್ಷನ್ಸ್ ಮಾಲಕ ಅರುಣ್ ಪ್ರಕಾಶ್ ಶೆಟ್ಟಿ, ಹೋಟೆಲ್ ಪಂಚರತ್ನ ಇಂಟರ್ ನ್ಯಾಶನಲ್ ನಿರ್ದೇಶಕ ವಿನಯ್ ಶೆಟ್ಟಿ, ಬಂಟ ಸಮಾಜದ ಪ್ರಮುಖರಾದ ನೀಲೇಶ್ ಶೆಟ್ಟಿ, ಮಿಜಾರುಗುತ್ತು ಹರಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮೂಡುಬಿದಿರೆಯ ಪತ್ರಕರ್ತರನ್ನು ಯುವ ಬಂಟರ ಸಂಘದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.ಯುವ ಬಂಟರ ಸಂಘದ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಸ್ವಾಗತಿಸುತ್ತಾ ಯುವ ಬಂಟರ ಸಂಘದ ವತಿಯಿಂದ ಕಳೆದ ವರ್ಷವೂ 120 ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿರುವುದನ್ನು ನೆನಪಿಸಿದರು.ಬಂಟರ ಸಂಘದ ಉಪಾಧ್ಯಕ್ಷರು ಗಳಾದ ಭರತ್ ಶೆಟ್ಟಿ ಇರುವೈಲು, ರಮೇಶ್ ಶೆಟ್ಟಿ, ಸಂದೀಪ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಸಂದೀಪ್ ಎಂ.ಶೆಟ್ಟಿ , ಮನೋಜ್ ಶೆಟ್ಯಿ ಅಶೋಕ್ ಶೆಟ್ಟಿ, ಸುಧಾಕರ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Latest News

Related Posts