ಬೆಳ್ತಂಗಡಿ: ತಾಲೂಕಿನ ಬಂಗಾಡಿ ಉರ್ಲ ಎಂಬಲ್ಲಿ ತೀರಾ ಬಡತನದ ನಡುವೆ ಇಂದೋ ನಾಳೆಯೋ ಎಂಬಂತೆ ಕುಸಿಯುವ ಭೀತಿ ಎದುರಿಸುತ್ತಿರುವ ಕಾನದು ಎಂಬವರ ನಿವಾಸಕ್ಕೆ ಈ ದಿನ ಬೆಳ್ತಂಗಡಿಯ ಮಾಜಿ ಶಾಸಕ ಕೆ. ವಸಂತ ಬಂಗೇರರವರು ತುರ್ತು ಭೇಟಿ ನೀಡಿ ಮನೆಗೆ ಬೇಕಾದ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಿದರು. ಹಾಗೂ ಕುಸಿತದ ಭೀತಿಯಲ್ಲಿರುವ ಕಾನದುರವರಿಗೆ ತಾತ್ಕಾಲಿಕ ಮನೆಯ ಸೌಲಭ್ಯ ಕಲ್ಪಿಸುವ ಭರವಸೆಯನ್ನು ಸ್ಥಳದಲ್ಲೇ ನೀಡಿ, ಈಗಾಗಲೇ ಮನೆಯ ಆಯ ಸುತ್ತಳತೆಗೆ ಕ್ರಮ ವಹಿಸುವುದಾಗಿಯೂ ನಾಳೆಯೇ ಕೆಲಸ ಕಾರ್ಯ ಆರಂಭಿಸುವುದಾಗಿಯೂ ತಿಳಿಸಿದರು. ಈ ಸಂದರ್ಭದಲ್ಲಿ ಯುವ ಇಂಟಕ್ ಅಧ್ಯಕ್ಷ ಅನೂಪ್ ಬಂಗೇರ, ಇಸ್ಮಾಯಿಲ್ ಉರ್ಲ, ಮಾದ್ಯಮ ಪ್ರತಿನಿಧಿಗಳು, ಅಲ್ವಿನ್ ಅಪ್ಪೋಸ್, ಪೆಡ್ರಿಕ್ ಪಿಂಟೋ ಹಾಗೂ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.






