ಸಿಯೋನ್ ಆಶ್ರಮದಲ್ಲಿ ಸ್ವಚ್ಛತಾ ಅಭಿಯಾನ

ಸಿಯೋನ್ ಆಶ್ರಮದಲ್ಲಿ ಸ್ವಚ್ಛತಾ ಅಭಿಯಾನ
Facebook
Twitter
LinkedIn
WhatsApp

ಬೆಳ್ತಂಗಡಿ: ನೆರಿಯ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಕೋವಿಡ್ ಮಹಾಸ್ಫೋಟದ ಪರಿಣಾಮವಾಗಿ ಸಿಯೋನ್ ಆಶ್ರಮದ ನಿವಾಸಿಗರನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆ ಹಾಗೂ ಧರ್ಮಸ್ಥಳ ರಜತಾದ್ರಿ ಸರಕಾರಿ ಕ್ವಾರೆಂಟೈನ್ ಕೇಂದ್ರಕ್ಕೆ  ವರ್ಗಾವಣೆ ಮಾಡಲಾಗಿದ್ದು, ಪ್ರಸ್ತುತ ಕೋರೆಂಟೈನ್ ಮುಗಿಸಿ,  ಜೂನ್ 20ರಂದು ಮರಳಿ ಆಶ್ರಮ ಸೇರಲಿದ್ದಾರೆ. ಈ ಮಧ್ಯೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಕೋವಿಡ್ ಟಾಸ್ಕ್‌ಫೋರ್ಸ್ ಹಾಗೂ ಯುವಜನ ಒಕ್ಕೂಟ ಹಾಗೂ ಗಂಡಿಬಾಗಿಲು ಚರ್ಚ್ ಆಡಳಿತ ಮಂಡಳಿಯ ನೇತೃತ್ವದಲ್ಲಿ ಸಿಯೋನ್ಆಶ್ರಮದಲ್ಲಿಬೃಹತ್ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಮಾನೇಜಿಂಗ್ ಟ್ರಸ್ಟಿ ಯು. ಸಿ. ಪೌಲೋಸ್, ಸುಭಾಷ್, ಸಂಧ್ಯಾ ಇವರ ಮಾರ್ಗದರ್ಶನದಂತೆ ಸ್ವಚ್ಛತೆ ನಡೆಸಲಾಯಿತು. ಸುಮಾರು 50ಕ್ಕಿಂತ ಹೆಚ್ಚು ಎಸ್.ಎಂ.ವೈ.ಎಂ. ಸದಸ್ಯರು ಹಾಗೂ 6ಮಂದಿ ಧರ್ಮಗುರುಗಳ ಸಹಬಾಗಿತ್ವದಲ್ಲಿ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು.ಧರ್ಮ ಪ್ರಾಂತ್ಯದ ಟಾಸ್ಕ್‌ಫೋರ್ಸ್‌ನ ಸಂಯೋಜಕರಾದ ವಂದನೀಯ ಬಿನೋಯಿ ಎ. ಜೆ., ಸಹ ಸಂಯೋಜಕರಾದ ವಂದನೀಯ ಷಾಜಿ ಮಾಥ್ಯೂ, ಎಸ್.ಎಂ.ವೈ.ಎಂ ನಿರ್ದೇಶಕರಾದ ವಂದನೀಯ ಚೀರನ್ ಜೋಸೆಫ್ , ವಂದನೀಯ ರೋಬಿನ್, ವಂದನೀಯ ಅಜಯ್, ವಂದನೀಯ ಕ್ರಿಸ್ಟಿ, ವಂದನೀಯ ಸುನಿಲ್ ಉಪಸ್ಥಿತರಿದ್ದರು.ಗಂಡಿಬಾಗಿಲು ಚರ್ಚ್ ಆಡಳಿತ ಮಂಡಳಿಯ .ಚಾಂಡಿ, ಜೋಯ್, ಮನೋಜ್  ಸುಜನ್,  ಥೋಮಸ್, ಬೇಬಿ ಇವರು ವ್ಯವಸ್ಥೆಗಳ ಮೇಲುಸ್ತುವಾರಿ ವಹಿಸಿದ್ದರು.

Latest News

Related Posts