‘ಆಪ್ತರಕ್ಷಕ’ ಸೇವಾ ಕಾರ್ಯದ ಸಮಾರೋಪ

‘ಆಪ್ತರಕ್ಷಕ’ ಸೇವಾ ಕಾರ್ಯದ ಸಮಾರೋಪ
Facebook
Twitter
LinkedIn
WhatsApp

ಬೆಳ್ತಂಗಡಿ: ಕೊರೊನಾ ಮಹಾಮಾರಿಯಿಂದ ಜನ-ಜೀವನ ತತ್ತರಿಸಿದ  ಸಂದರ್ಭದಲ್ಲಿ  ಸಮಾಜಮುಖೀ ತುಡಿತದೊಂದಿಗೆ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ಬಾಧಿತ  ಶ್ರೀಸಾಮಾನ್ಯರ ನೋವಿಗೆ ‘ಆಪ್ತರಕ್ಷಕ’ ಎಂಬ ತುರ್ತು ವಾಹನ ಸೇವೆ ಕಳೆದ 40 ದಿನ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಿಂದ ಉಚಿತವಾಗಿ ಮಾಡಲಾಗಿತ್ತು. ಉತ್ತಮ ಸಮಾಜ ಸೇವೆಗೆ ಹಲವು ಮಂದಿ ಸಹ ಕರಿಸಿದ್ದಾರೆ. ಇದರ  ಸಮಾರೋಪ ಕಾರ್ಯಕ್ರಮ ಜೂನ್ 20ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಭಾಗವಹಿಸಿ  ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ರೋಟರಿ ಕ್ಲಬ್  ಸಹಕಾರವನ್ನು ಸ್ಮರಿಸಿ, ಅಭಿನಂದಿಸಿ, ಮುಂದೆ  ತಾಲೂಕಿನ 81ಗ್ರಾಮಗಳಲ್ಲಿ  ಜನಜಾಗೃತಿ ಮೂಡಿಸಲು ತಂಡದ ಪೂರ್ಣ ಸಹಕಾರ ಕೋರಿದರು. ಇದೇ ಸಂದರ್ಭದಲ್ಲಿ ಆಪ್ತರಕ್ಷಕ ಉಚಿತ ವಾಹನದ ವ್ಯವಸ್ಥೆ ಒದಗಿಸಿದ ಉದ್ಯಮಿಗಳಾದ ರವಿಚಂದ್ರ ಚಕ್ಕಿತ್ತಾಯ, ಜೈಸನ್ ಜೋಯಲ್ ಡಿ’ಸೋಜಾ, ನೋಟರಿ ವಕೀಲರಾದ ಗೋಪಾಲಕೃಷ್ಣ ಗುಲ್ಲೋಡಿ, ಸುರೇಶ್ ಪೆರ್ಲ, ಉಜಿರೆಯ ಉದಯ ಅಚಾರಿ, ಶಶಿಧರ್ ಎಂ. ಕಲ್ಮಂಜ ಇವರನ್ನು ಸಮ್ಮಾನಿಸಲಾಯಿತು ಮತ್ತು 40 ದಿನದಿಂದ ಆಪ್ತರಕ್ಷಕ ತಂಡದಲ್ಲಿ ಸೇವೆ ನೀಡಿದ 15 ಮಂದಿ ಸ್ವಯಂಸೇವಕ  ಸಿಬ್ಬಂದಿಗಳನ್ನು ಶಾಸಕರು ಸಮ್ಮಾನಿಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ರೋಟರಿ ಕ್ಲಬ್  ನಿಯೋಜಿತ ಅಧ್ಯಕ್ಷ ಶರತ್ ಕೃಷ್ಣ ಪಡ್ವೇಟ್ನಾಯ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಉಜಿರೆ ಗ್ರಾಮ  ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ್ ಕೆ. ವಿ., ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಲಕ್ಷ್ಮೀ ಗ್ರೂಪ್‌ನ  ಮೋಹನ್ ಕುಮಾರ್, ಸಂಧ್ಯಾ ಟ್ರೇಡರ್ಸ್‌ನ ರಾಜೇಶ್ ಪೈ , ಉದ್ಯಮಿ ರವಿಚಂದ್ರ ಚಕ್ಕಿತ್ತಾಯ, ಉದ್ಯಮಿ ಲಕ್ಷ್ಮಣ ಸಪಲ್ಯ, ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಶಿಧರ್ ಎಮ್. ಕಲ್ಮಂಜ, ನೋಟರಿ ವಕೀಲ ಗೋಪಾಲಕೃಷ್ಣ ಗುಲ್ಲೋಡಿ, ಶ್ರೀಧರ್ ಮರಕ್ಕಡ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ  ಸದಸ್ಯರು ಉಪಸ್ಥಿತರಿದ್ದರು. [

Latest News

Related Posts