ಬೆಳ್ತಂಗಡಿ: ಕೊರೋನಾ ಲಾಕ್‌ಡೌನ್ ನಿಯಮವನ್ನು ಸಡಿಲಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಜೂನ್ 20ರಂದು ಹೊರಡಿಸಿದ ಮಾರ್ಗಸೂಚಿಯಂತೆ ಕೃಷಿಗೆ ಪೂರಕವಾದ ವ್ಯವಹಾರಗಳಿಗೆ ಷರತ್ತುಬದ್ಧ ಅನುಮತಿ ನೀಡಿದ್ದು, ಅದರಂತೆ ಜೂನ್ 21ರಿಂದ ಉಜಿರೆ ರಬ್ಬರು ಸೊಸೈಟಿಯಲ್ಲಿ ಬೆಳಿಗ್ಗೆ ಗಂಟೆ 9-30ರಿಂದ ಮಧ್ಯಾಹ್ನ ಗಂಟೆ 1-00ರತನಕ ವ್ಯವಹಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಂಗೆತ್ತ್ಯಾರು ರಾಜುಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೊಸೈಟಿಯ ಸದಸ್ಯ ಬೆಳೆಗಾರರು ಸರಕಾರ ಸೂಚಿಸಿರುವ ಕೋವಿಡ್ ನಿಯಮ ಪಾಲಿಸಿ, ಸಕಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ವ್ಯವಹಾರ ನಡೆಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.





