50 ಪಲ್ಸ್ ಆಕ್ಸಿಮೀಟರ್, ಆಹಾರದ ಕಿಟ್,‌ ಎನ್-95 ಮಾಸ್ಕ್ ವಿತರಣೆ

50 ಪಲ್ಸ್ ಆಕ್ಸಿಮೀಟರ್,  ಆಹಾರದ ಕಿಟ್,‌ ಎನ್-95 ಮಾಸ್ಕ್ ವಿತರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ಮಾಜಿ‌ ಶಾಸಕ‌‌ ವಸಂತ ಬಂಗೇರ ಅವರ ಪುತ್ರಿಯರು ಮತ್ತು ಅಳಿಯಂದಿರ ಪ್ರಾಯೋಜಕತ್ವದಲ್ಲಿ ಬೆಳ್ತಂಗಡಿ ತಾಲೂಕು ಆರೋಗ್ಯ ಇಲಾಖೆಗೆ 50 ಪಲ್ಸ್ ಆಕ್ಸಿಮೀರ್ ಕೊಡುಗೆ; ಹಾಗೂ ತಾಲೂಕಿನ 70 ಮಂದಿ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ, ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ 16ಮಂದಿ ಪೌರ ಕಾರ್ಮಿಕರಿಗೆ ಮತ್ತು ಇತರ 15 ಆಯ್ದ ಕುಟುಂಬಗಳಿಗೆ ಆಹಾರದ ಕಿಟ್ ಮತ್ತು ಎನ್-95 ಮಾಸ್ಕ್ ವಿತರಣಾ ಕಾರ್ಯಕ್ರಮ ಜೂನ್ 21ರಂದು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆಯಿತು. ಮಾಜಿ ಶಾಸಕ ವಸಂತ ಬಂಗೇರ ಈ ಸೌಲಭ್ಯಗಳನ್ನು ವಿತರಿಸಿದರು.ಪಲ್ಸ್ ಆಕ್ಸಿಮೀಟರ್ ಮತ್ತು 200 ಮಾಸ್ಕ್‌ಗಳನ್ನು ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್, ಆಶಾ ಮೆಂಟರ್ ಹರಿಣಿ ಹಾಗೂ ಪುಷ್ಪಾ ಇವರು ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ವಸಂತ ಬಂಗೇರರ ಹಿರಿಯ ಪುತ್ರಿ ಪ್ರೀತಿತಾ ವಿಜೇತ್,ಮತ್ತು ಅಳಿಯ ಧರ್ಮವಿಜೇತ್,ಕಿರಿಯ ಪುತ್ರಿ ಬಿನುತಾ ಸಂಜೀವ್ ಮತ್ತು ಅಳಿಯ ಸಂಜೀವ್, ಮೊಮ್ಮಕ್ಕಳಾದ ಪೂರ್ವಿಕಾ, ವೇದಾಂತ್ ಸುಬ್ರಹ್ಮಣ್ಯ ಮತ್ತು ಖುಷಿ, ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಬ್ಲಾಕ್‌ನ ಅಧ್ಯಕ್ಷ ರಂಜನ್ ಜಿ. ಗೌಡ, ತಾಲೂಕು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಬಿ .ಕೆ. ವಸಂತ್, ಅನೂಪ್ ಜೆ ಬಂಗೇರ, ಪಟ್ಟಣ‌ ಪಂಚಾಯತ್ ಸದಸ್ಯರಾದ ಜಗದೀಶ್ ಡಿ. ಮತ್ತು ಜನಾರ್ದನ ಕುಲಾಲ್ ಉಪಸ್ಥಿತರಿದ್ದರು.ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ ಸ್ವಾಗತಿಸಿದರು. ಗೃಹರಕ್ಷಕ ದಳದ ಸಿಬ್ಬಂದಿ ವಿನೋದ್‌ರಾಜ್ ಆಳ್ವ ವಂದಿಸಿದರು.

Latest News

Related Posts