ಮೊಬೈಲ್ ರಿಟೈಲರ್ಸ್ ಸಂಕಷ್ಟ ಪರಿಹರಿಸಲು ಮನವಿ

ಮೊಬೈಲ್ ರಿಟೈಲರ್ಸ್ ಸಂಕಷ್ಟ ಪರಿಹರಿಸಲು ಮನವಿ
Facebook
Twitter
LinkedIn
WhatsApp
ಬೆಳ್ತಂಗಡಿ: ಲಾಕ್‌ಡೌನ್‌ನ ಈ ಸಮಯದಲ್ಲಿ ತಾಲೂಕಿನ ಸುಮಾರು 65ಕ್ಕೂ ಹೆಚ್ಚು ಮೊಬೈಲ್ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದು, ಅಂಗಡಿ ಮಾಲೀಕರ ಬದುಕು ಸಂಕಷ್ಟಕ್ಕೀಡಾಗಿದ್ದು, ಗ್ರಾಹಕರು ಕೂಡಾ ತುಂಬಾ ಪರದಾಡುವಂತಾಗಿದೆ. ಕೆಲವರ ಮೊಬೈಲ್ ಕೆಟ್ಟು ಹೋಗಿ ಮಕ್ಕಳ ಆನ್‌ಲೈನ್ ಕ್ಲಾಸ್‌ಗೆ ತುಂಬಾನೇ ತೊಂದರೆ ಆಗುತ್ತಿದೆ. ಹಳ್ಳಿಗಳಲ್ಲಿ ಸಣ್ಣ ರಿಚಾರ್ಜ್‌ಗೂ ಮೊಬೈಲ್ ಅಂಗಡಿಯನ್ನು ಅವಲಂಬಿಸಿದ್ದು ಜನರು ತುಂಬಾ ಪರದಾಡುವಂತಾಗಿದೆ. ಕೆಲವರ ಸಿಮ್ ಹಾಳಾಗುತ್ತಿದ್ದು ಮೊಬೈಲ್ ಇಲ್ಲದೆ ತುಂಬ ಕಷ್ಟ ಅನುಭವಿಸುತಿದ್ದಾರೆ. ಅದಲ್ಲದೆ ಸರ್ಕಾರ Online ಸೇವೆಗಳಾದ amazon, flipcartಗಳಿಗೆ ಅವಕಾಶ ಕೊಟ್ಟು ತಾಲೂಕಿನ ಎಲ್ಲಾ ವರ್ತಕರಿಗೆ ಅನ್ಯಾಯ ಮಾಡಿದೆ. ನಾವು ಬಡಪಾಯಿ ವರ್ತಕರು ಲಾಕ್‌ಡೌನ್ ಓಪನ್ ಅದ ಕೂಡಲೇ ವ್ಯಾಪಾರವಿಲ್ಲದೆ ಬೀದಿಗೆ ಬರುವ ಪರಿಸ್ಥಿತಿ ಬರಬಹುದು. ಅಂಗಡಿ ಬಂದ್ ಇದ್ದ ಸಮಯದಲ್ಲಿ ಬಾಡಿಗೆ, ಕೆಲಸದವರ ಖರ್ಚು, ಮನೆ ಖರ್ಚು ಎಲ್ಲವನ್ನು ನಿಭಾಯಿಸುವುದು ಕಷ್ಟವಾಗಿದೆ. ಗ್ರಾಹಕರು ಆನ್‌ಲೈನ್‌ ವ್ಯವಹಾರಕ್ಕೆ ಹೋಗುತ್ತಿರುವುದರಿಂದ ಇನ್ನು ಲಾಕ್‌ಡೌನ್ ಓಪನ್ ಅದ ನಂತರ ಅಂಗಡಿ ಮಾಲೀಕರು ತುಂಬಾನೇ ನಷ್ಟ ಅನುಭವಿಸುವುದು ಗ್ಯಾರಂಟಿ. ಹಾಗಾಗಿ ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಮೊಬೈಲ್ ಕೂಡ ಅಗತ್ಯ ವಸ್ತುಗಳಲ್ಲಿ ಒಂದು ಎಂದು ಪರಿಗಣಿಸಿ, ಬೆಳ್ಳಿಗೆ 10 ಗಂಟೆ ಯ ತನಕವಾದರೂ ಮೊಬೈಲ್ ಶಾಪ್ ತೆರೆಯಲು ಅವಕಾಶ ಕೊಡಬೇಕು; ತಾಲೂಕಿನ ಯುವ ಜನತೆ ನಿಮ್ಮ ಮಾತನ್ನು ಕೇಳುವುದರಿಂದ online ನಲ್ಲಿ ಖರೀದಿಯನ್ನು ಕಮ್ಮಿ ಮಾಡಿ ಹತ್ತಿರದ ಅಂಗಡಿಯಿಂದ ಖರೀದಿಮಾಡುವಂತೆ ಮನವಿ ಮಾಡಿಕೊಂಡು ಒಂದು ಅಭಿಯಾನ ಮಾಡಿದರೆ ಮೊಬೈಲ್ ಮಾರಾಟಗಾರರಿಗೆ ಮಾತ್ರವಲ್ಲ; ಎಲ್ಲಾ ವರ್ತಕರಿಗೂ ಉಪಯೋಗ ಆಗುವುದು. ಹಾಗೂ ಸರಕಾರದಿಂದ ಮೊಬೈಲ್ ವರ್ತಕರ ಬಿಸಿನೆಸ್ ಲೋನ್ ತಿಂಗಳ ಕಂತನ್ನು 3ತಿಂಗಳ ಮಟ್ಟಿಗೆ ಯಾವುದೇ ಬಡ್ಡಿ ಹಾಕದೆ ಮುಂದೆ ಹಾಕುವಂತೆ ಸರಕಾರವನ್ನು ಒತ್ತಾಯಿಸಬೇಕು.ಎಲ್ಲಾ ಮೊಬೈಲ್ ಅಂಗಡಿ ಮಾಲೀಕರು ಮತ್ತು ನೌಕರರಿಗೆ ವಾಕ್ಸಿನೇಷನ್‌ಗೆ ಅರೋಗ್ಯ ಅಧಿಕಾರಿಗಳಲ್ಲಿ ಸಂಘದಿಂದ ಅರ್ಜಿ ಕೊಟ್ಟು 1ವಾರ ಕಳೆದಿದ್ದರೂ ಇನ್ನೂ ವ್ಯಾಕ್ಸಿನೇಷನ್ ಬಗ್ಗೆ ಯಾವುದೇ ಸಕಾರಾತ್ಮಕ ಉತ್ತರ ಬರದೇ ಇದ್ದ ಕಾರಣ ಆದಷ್ಟು ಬೇಗ ವ್ಯಾಕ್ಸಿನೇಶನ್ ಕೊಡಿಸಬೇಕು. ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹಾರ ನಡೆಸುವವರಿಗೆ ಬಾಡಿಗೆ ರಿಯಾಯಿತಿ ಮಾಡುವಂತೆ ಹಾಗೂ ಸರಕಾರದ ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹಾರ ನಡೆದುವ ಮೊಬೈಲ್ ಅಂಗಡಿಯವರಿಗೆ 3ತಿಂಗಳ ಬಾಡಿಗೆ ಮನ್ನಾ ಮಾಡಬೇಕು; ಮತ್ತಿತರ ಬೇಡಿಕೆಗಳುಳ್ಳ ಮನವಿಯನ್ನುಮೊಬೈಲ್ ರೆಟೈಲರ್ಸ್ ಪರವಾಗಿ ಬೆಳ್ತಂಗಡಿ ತಾಲೂಕು ಮೊಬೈಲ್ ರೆಟೈಲರ್ಸ್ ಯೂನಿಯನ್ ಅಧ್ಯಕ್ಷರಾದ ವೀರಚಂದ್ರ ಜೈನ್, ಜೈನ್ ಮೊಬೈಲ್, ಬೆಳ್ತಂಗಡಿ ಇವರು ಶಾಸಕ ಹರೀಶ್ ಪೂಂಜರಿಗೆ ಮನವಿ ನೀಡಿ ವಿನಂತಿಸಿಕೊಂಡರು.

Latest News

Related Posts