ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾದ್ಯಂತ ಕೊರೋನ ಪೀಡಿತರಾಗಿ ಕಾರಂಟೈನ್ನಲ್ಲಿರುವ ಹಾಗೂ ಮನೆಯಿಂದ ಹೊರಗೆ ಬರಲು ಅನಾನುಕೂಲವಾಗಿದ್ದವರನ್ನು ಗುರುತಿಸಿ, ಅಂತವರ ಕಷ್ಟಗಳಿಗೆ ಸ್ಪಂದಿಸಿ ಆಹಾರ ಪರಿಕರಗಳ ಕಿಟ್ಗಳನ್ನು ಅವರವರ ಮನೆಗೆ ಹೋಗಿ ನೇರವಾಗಿ ಕೊಡುವ ಯೋಜನೆಯನ್ನು ಹಮ್ಮಿಕೊಂಡಿರುವ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರ ಮಕ್ಕಳು ಹಾಗೂ ಕುಟುಂಬಿಕರು ಜೂನ್ 29ರಂದು ವೇಣೂರು ಹೋಬಳಿಯ ವೇಣೂರು, ಕರಿಮಣೇಲು, ಬಡಕೊಡಿ, ಬಜ್ರೆ ಮತ್ತು ಹೊಸಂಗಡಿ ಗ್ರಾಮಗಳಲ್ಲಿ ಅಗತ್ಯ ದಿನಬಳಕೆ ವಸ್ತುಗಳ ಕಿಟ್ ವಿತರಣೆ ಮಾಡಿದರು.ಬಡವರ ಕಷ್ಟಗಳಿಗೆ ಸದಾ ಸ್ಪಂದಿಸುವ ಬಡವರಬಂಧು ಎಂದೇ ಅಭಿಮಾನಿಗಳಿಂದ ಗುರುತಿಸಲ್ಪಟ್ಟಿರುವ ಮಾಜಿ ಶಾಸಕ ವಸಂತ ಬಂಗೇರರು ತಮ್ಮ ಮಕ್ಕಳಾದ ಪ್ರಿತಿತಾ ಬಂಗೇರ, ಬಿನುತ ಬಂಗೇರ, ಅಳಿಯ ಧರ್ಮವಿಜೇತ್, ಮೊಮ್ಮಗ ವೇದಾಂತ್ರ ಮುಖಾಂತರ ಆಹಾರ ಕಿಟ್ಗಳನ್ನು ಕಳಿಸಿಕೊಟ್ಟಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ ಧರಣೇಂದ್ರ ಕುಮಾರ್, ಪ್ರಭಾಕರ್ ಹೆಗ್ಡೆ ಹೆಟ್ಟಾಜೆಗುತ್ತು, ರಾಕೇಶ್ ಕುಮಾರ್ ಮೂಡುಕೋಡಿ, ಶಶಿಧರ್ ಶೆಟ್ಟಿ ಮೂಡುಕೋಡಿ, ಮುಸ್ತಾಪ ನಡ್ತಿಕಲ್, ಅರವಿಂದ ಶೆಟ್ಟಿ ಖಂಡಿಗ, ಸುದರ್ಶನ್ ಮೂಡುಕೋಡಿ, ಲಕ್ಷ್ಮಣ ಮೂಡುಕೋಡಿಇಸ್ಮಾಯಿಲ್ ಕೆ. ಪೆರಿಂಜೆ, ಸುದರ್ಶನ್ ಪಿಲ್ಲಾಂ ಮತ್ತಿತರರು ಉಪಸ್ಥಿತರಿದ್ದರು






