ಮೂಡುಬಿದಿರೆ: ಇಲ್ಲಿನ ಪ್ರಸಿದ್ಧ ವಸ್ತ್ರ ಮಳಿಗೆ ” ಸಿದ್ಧ ” ಇದರ ಮಾಲಕ ರವೀಂದ್ರ ಪೈ ಅವರು ಅನಿರೀಕ್ಷಿತ ನಿಧನರಾಗಿದ್ದು ಆ ಪ್ರಯುಕ್ತ ಅವರ ಗೌರವಾರ್ಥ ಮೂಡಬಿದರೆಯ ಸಮಸ್ತ ಜವುಳಿ ವರ್ತಕ ಬಾಂಧವರು ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಎರಡು ಗಂಟೆಗಳವರೆಗೆ ತಮ್ಮ ಜವುಳಿ ವ್ಯಾಪಾರ ವಹಿವಾಟನ್ನು ಬಂದ್ ಮಾಡಿ ಶೋಕಾಚರಣೆ ಆಚರಿಸಿದರು.ಅಂದು ಮಧ್ಯಾಹ್ನ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಜವುಳಿ ವರ್ತಕರ ಸಂಘದ ವತಿಯಿಂದ ಶೃದ್ಧಾಂಜಲಿ ಸಭೆಯನ್ನು ನಡೆಸಲಾಯಿತು. ಮೂಡುಬಿದಿರೆಯ ಬಹುತೇಕ ಎಲ್ಲಾ ಜವುಳಿ ವ್ಯವಹಾರಸ್ಥರು ಈ ಸಭೆಯಲ್ಲಿ ಭಾಗವಹಿಸಿದರು. ಜವುಳಿ ವರ್ತಕರ ಸಂಘದ ಕಾರ್ಯದರ್ಶಿ ಸದಾಶಿವರಾವ್ ನೆಲ್ಲಿಮಾರ್ ಮಾತನಾಡಿ “ವೃತ್ತಿ ಬಾಂಧವರಿಗಾಗಿ ರವೀಂದ್ರ ಪೈಗಳ ಹೋರಾಟ ಸದಾ ನೆನಪಿನಲ್ಲಿ ಉಳಿಯಲಿದೆ. ಲಾಕ್ ಡೌನ್ ಸಂಧರ್ಭ ಸಂಬಂಧ ಪಟ್ಟ ಇಲಾಖೆಗಳೊಡನೆ ನಿತ್ಯ ಸಂಪರ್ಕ, ಶಾಸಕರೊಡನೆ, ಪುರಸಭಾಧಿಕಾರಿಗಳೊಡನೆ, ತಾಲೂಕು ದಂಡಾಧಿಕಾರಿಗಳೊಡನೆ, ಉಸ್ತುವಾರಿ ಸಚಿವರೊಡನೆ, ಜಿಲ್ಲಾಧಿಕಾರಿಗಳೊಡನೆ ನಿತ್ಯ ಮಾತುಕತೆ ನಡೆಸಿ ಜವುಳಿ ವರ್ತಕರ ಹಿತಾಸಕ್ತಿ ಕಾಪಾಡಲು ನಿತ್ಯ ಶ್ರಮಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಎರಡು ಬಾರಿ ಜವಳಿ ವರ್ತಕ ಬಾಂಧವರಿಂದ ರಕ್ತದಾನ ಶಿಬಿರ ಏರ್ಪಡಿಸಿ ದಾಖಲೆ ರಕ್ತ ಸಂಗ್ರಹಿಸಿ ಕೊಡುವಿಕೆ , ಮೂಡುಬಿದರೆಯ ಎಲ್ಲಾ ಜವಳಿ ಮಳಿಗೆಗಳಲ್ಲಿರುವ ಎಲ್ಲ ನೌಕರರಿಗೆ ಉಚಿತ ವ್ಯಾಕ್ಸಿನ್ ಕೊಡಿಸುವಲ್ಲಿ ಪ್ರಯತ್ನ ಹಾಗೂ ಯಶಸ್ಸು, ಮೂಡುಬಿದಿರೆಯ ಕೆಲವು ಸರಕಾರಿ ಕಚೇರಿಗಳಿಗೆ ಆಟೋಮೆಟಿಕ್ ಸ್ಯಾನಿಟೈಸ್ ಮಿಷನ್ ಅಳವಡಿಸುವಿಕೆ, ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡoತಹ ದಿ. ರವೀಂದ್ರ ಪೈಯವರ ಹಠಾತ್ ಅಗಲುವಿಕೆ ಜವುಳಿ ವ್ಯವಹಾರಸ್ಥರಿಗೆ ತುಂಬಲಾರದ ನಷ್ಟವಾಗಿದೆ” ಎಂದರು. ಸಂಘದ ಗೌರವಾಧ್ಯಕ್ಷರಾದ ಪ್ರಭಾಚಂದ್ರ ಜೈನ್, ಉಪಾಧ್ಯಕ್ಷರಾದ ಗಾಯತ್ರಿ ದಯಾನಂದ, ಕೋಶಾಧಿಕಾರಿಗಳಾದ S.N.ಬೋರ್ಕರ್, ಸಾಂಸ್ಕೃತಿಕ ಕಾರ್ಯದರ್ಶಿ ಪೂರ್ಣಚಂದ್ರ ಜೈನ್, ಮಯೂರಿ ಸಿಲ್ಕ್ಸ್ ನ ರಾಜೇಂದ್ರ ಜೈನ್, ಅನ್ವರ್ ಸಾದಿಕ್, ಗೋವಿಂದ ಪ್ರಜಾಪತ್ ಮತ್ತಿತರರು ಅಗಲಿದ ರವೀಂದ್ರ ಪೈಯವರ ವ್ಯಾವಹಾರಿಕ ಸಾಧನೆ ಮತ್ತು ವ್ಯಕ್ತಿತ್ವದ ಗುಣಗಾನ ಮಾಡಿದರು. ಇದೇ ಸಂದರ್ಭದಲ್ಲಿ ಮೂಡುಬಿದಿರೆ ಸಮಾಜ ಮಂದಿರದ ವಾಣಿಜ್ಯ ಸಂಕೀರ್ಣದಲ್ಲೂ ದಿ. ರವಿಂದ್ರ ಪೈ ಗಳು ಟೆನೆಂಟ್ ದಾರ ರಾದುದರಿಂದ ಸಮಾಜಮಂದಿರ ಸಭಾ ದ ಕಾರ್ಯದರ್ಶಿ ಸುರೇಶ್ ಪ್ರಭು ಅವರೂ ಸಂತಾಪ ಸೂಚಿಸಿ ರವೀಂದ್ರ ಪೈಯವರ ಆತ್ಮಕ್ಕೆ ಶಾಂತಿ ಕೋರಿದರು.






