ಸಣ್ಣ ನೀರಾವರಿ ಸಚಿವರಿಂದ ವಿವಿಧ ಕಾಮಗಾರಿಗಳ ಪರಿಶೀಲನೆ

ಸಣ್ಣ ನೀರಾವರಿ ಸಚಿವರಿಂದ  ವಿವಿಧ ಕಾಮಗಾರಿಗಳ  ಪರಿಶೀಲನೆ
Facebook
Twitter
LinkedIn
WhatsApp

ಬೆಳ್ತಂಗಡಿ: ರಾಜ್ಯ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರು ಜುಲೈ 3ರಂದು ಬೆಳ್ತಂಗಡಿಗೆ ಭೇಟಿ ನೀಡಿ ಪ್ರಗತಿ ಹಂತದಲ್ಲಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ಸುಮಾರು ರೂಪಾಯಿ 5  ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಳಿಯ ಗ್ರಾಮ ಪಂಚಾಯತ್ ಮತ್ತು ಕೊಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಪಳ ಸಂಪರ್ಕ ಸೇತುವೆ, ಕಿಂಡಿ ಅಣೆಕಟ್ಟು ಮತ್ತು ತಡೆಗೋಡೆ ಕಾಮಗಾರಿ ಹಾಗೂಸುಮಾರು ರೂಪಾಯಿ 3.5  ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಣಿಯೂರು ಗ್ರಾಮ ಪಂಚಾಯತ್ ಹಾಗೂ ಮಚ್ಚಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲೇಜಿ-ಕಲಾಯಿ ಸಂಪರ್ಕ ಸೇತುವೆ, ಕಿಂಡಿ ಅಣೆಕಟ್ಟು ಹಾಗೂ ತಡೆಗೋಡೆ ಕಾಮಗಾರಿಗಳನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಜತೆಗೂಡಿ ವೀಕ್ಷಣೆ ನಡೆಸಿದರು.ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಗೀತಾ ರಾಮಣ್ಣ ಗೌಡ, ಮಾಜಿ ಸದಸ್ಯೆ ಅಮಿತ ಕುಶಾಲಪ್ಪ, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಜೆ. ಗೌಡ, ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಗೌಡ, ಅಬ್ದುಲ್ ಕರೀಂ, ಇಂದಿರಾ ಶೆಟ್ಟಿ, ಕಣಿಯೂರು ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಎನ್., ಕಳಿಯ ಸಿ.ಎ. ಬ್ಯಾಂಕಿನ ನಿರ್ದೇಶಕರಾದ ಶಶಿಧರ್ ಶೆಟ್ಟಿ, ಶೇಖರ ನಾಯ್ಕ್, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ಧನ ಗೌಡ, ಪ್ರಮುಖರಾದ ಜನಾರ್ದನ ಬಜಿಲ, ದಾಮೋದರ ಗೌಡ, ಬಾಲಕೃಷ್ಣ ಗೌಡ ಬಿರ್ಮೊಟ್ಟು, ಕರುಣಾಕರ ಶೆಟ್ಟಿ, ಪ್ರಕಾಶ್ ಮೇರ್ಲ, ಚಿದಾನಂದ ನಾಯ್ಕ್, ಸುಧೀರ್ ಹಲೇಜಿ, ಕೇಶವ ಕುಳಾಯಿ, ಪುರಂದರ ಮತ್ತಿತರರು ಉಪಸ್ಥಿತರಿದ್ದರು.

Latest News

Related Posts