ನಾಡಿನ ‘ಸಹಕಾರಿ ಶಕ್ತಿ’ ಎನ್. ಎಸ್. ಗೋಖಲೆಯವರಿಗೆ ಭಾವಪೂರ್ವ ನುಡಿನಮನ

ನಾಡಿನ ‘ಸಹಕಾರಿ ಶಕ್ತಿ’ ಎನ್. ಎಸ್. ಗೋಖಲೆಯವರಿಗೆ ಭಾವಪೂರ್ವ ನುಡಿನಮನ
Facebook
Twitter
LinkedIn
WhatsApp

ಬೆಳ್ತಂಗಡಿ: ಸಹಕಾರಿ ಕ್ಷೇತ್ರದ ಅತ್ಯುತ್ತಮ ಚಿಂತಕ ಹಾಗೂ ಮಾರ್ಗದರ್ಶಕರಾಗಿದ್ದು, ಅನೇಕ ಸಂಘ ಸಂಸ್ಥೆಗಳ ಏಳಿಗೆಯಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡಿದ ಎನ್. ಎಸ್. ಗೋಖಲೆಯವರ ಜೀವನದ ಆದರ್ಶ ಹಾಗೂ ತತ್ವಗಳು ಮುಂದಿನ ಪೀಳಿಗೆಯ ಬೆಳವಣಿಗೆಗೆ ಮಾದರಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಜುಲೈ 5ರಂದು ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಹಿರಿಯ ಸಹಕಾರಿ ಧುರೀಣ ಎನ್. ಎಸ್. ಗೋಖಲೆಯವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಎನ್. ಎಸ್. ಗೋಖಲೆಯವರು ಸಮಾಜಕ್ಕೆ ಸಲ್ಲಿಸಿದ ವಿಶಿಷ್ಟ ಸೇವೆ ಬಗ್ಗೆ ಗೌರವ ಸೂಚಿಸಲು ತಾಲೂಕು ಮಟ್ಟದಲ್ಲಿ ವಿಶೇಷ ಕಾರ್ಯಕ್ರಮವನ್ನು ಒಂದು ವಾರದೊಳಗೆ ನಡೆಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.ದೇವಸ್ಥಾನದ ನಿರ್ಗಮಿತ ಆಡಳಿತ ಮೊಕ್ತೇಸರ ಅಡೂರು ವೆಂಕಟ್ರಾಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಶ್ರೀಕ್ಷೇತ್ರ ಧರ್ಮಸ್ಥಳದ ಬೀಡಿನ ಮ್ಯಾನೇಜರ್ ಮಹಾವೀರ,ಗಂಡಿಬಾಗಿಲು ಚರ್ಚ್‌ನ ಧರ್ಮಗುರು ವಂದನೀಯ ಷಾಜಿ ಮ್ಯಾಥ್ಯೂ, ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ಕಜೆ ವೆಂಕಟೇಶ್ವರ ಭಟ್, ತಾಲೂಕು ಪಂಚಾಯತ್‌ನ ಮಾಜಿ ಸದಸ್ಯ ವಿ. ಟಿ‌. ಸೆಬಾಸ್ಟಿಯನ್, ಬಂಗಾಡಿ ಸಿ.ಎ. ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎನ್. ಲಕ್ಷ್ಮಣಗೌಡ, ಮುಂಡಾಜೆ ಸಿ.ಎ‌ ಬ್ಯಾಂಕಿನ ಅಧ್ಯಕ್ಷ ಜನಾರ್ದನ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿನಿ ರವಿ, ಮುಂಡಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಮಚ್ಚಿಮಲೆ ಅನಂತ ಭಟ್, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಸಂಚಾಲಕ ನಾಮದೇವ ರಾವ್, ರೈತ ಸೇವಾ ಕೂಟದ ಡಿ‌. ಎ. ರೆಹಮಾನ್, ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಬಾಬು ಪೂಜಾರಿ, ಚಿತ್ಪಾವನ ಸಂಘಟನೆಯ ಸುಷ್ಮಾ ಶಶಾಂಕ ಭಿಡೆ, ಚಾರ್ಮಾಡಿ ಅನಂತ ರಾವ್, ಪತ್ರಕರ್ತ ಅಶ್ರಫ್ ಆಲಿ ಕುಂಞಿ, ಬೆಂದ್ರಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರರಾದ ಗೋಪಾಲಕೃಷ್ಣ ಇರ್ವತ್ರಾಯ, ಮುಂಡಾಜೆ ಯುವಕ ಮಂಡಲದ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಕುಟುಂಬಿಕರಾದ ವಾಸುದೇವ ಗೋಖಲೆ, ಪುತ್ರಿ ಮಾಯಾ ಗೋಖಲೆ ಹಾಗೂ ಇತರರು ನುಡಿನಮನ ಸಲ್ಲಿಸಿದರು.ಮುಂಡಾಜೆ ಸಿ.ಎ. ಬ್ಯಾಂಕ್‌ನ ಸಿಇಒ ನಾರಾಯಣ ಫಡ್ಕೆ ಕಾರ್ಯಕ್ರಮ ನಿರೂಪಿಸಿದರು.ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಜರಗಿದ ಕಾರ್ಯಕ್ರಮದಲ್ಲಿ, ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ, ಶ್ರೀ ವ್ಯಾಘ್ರಚಾಮುಂಡಿ ಮೂರ್ತಿಲ್ಲಾಯಿ ದೈವಸ್ಥಾನ, ಯುವಕ ಮಂಡಲ,ಮುಂಡಾಜೆ ಹಾಲು ಉತ್ಪಾದಕರ ಸಂಘ, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಶ್ರೀ ಕ್ಷೇತ್ರ ಯಕ್ಷಗಾನ ಬಯಲಾಟ ಸೇವಾ ಸಮಿತಿ, ಗ್ರಾಮ ಪಂಚಾಯಿತಿ ಮುಂಡಾಜೆ, ಮುಂಡಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶಾರದಾ ನಗರ, ಶ್ರೀ ದತ್ತಾತ್ರೇಯ ಭಜನಾ ಸಂಘ, ಚಿತ್ಪಾವನ ಸಂಘಟನೆ, ರೋಟರಿ ಸಮುದಾಯ ದಳ ಮುಂಡಾಜೆ ಮೊದಲಾದ ಸಂಘ-ಸಂಸ್ಥೆಗಳು ಸಹಭಾಗಿತ್ವವನ್ನು ವಹಿಸಿದ್ದವು.ಕಾರ್ಯಕ್ರಮದಲ್ಲಿ ಎನ್.ಎಸ್. ಗೋಖಲೆಯವರ ಸ್ಮರಣಾರ್ಥ ತಾಲೂಕಿನಲ್ಲಿ ಸಹಕಾರ ತರಬೇತಿ ಸಂಸ್ಥೆಯನ್ನು ಆರಂಭಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

Latest News

Related Posts