ಬೆಳ್ತಂಗಡಿ: ದರ್ಪಣ ಇದು ಅರಿವಿನ ದೀವಿಗೆ ತಂಡ. ರೇಡಿಯೋ ನಿನಾದ, ಮಡಿಲು ಸಾಂಸ್ಕೃತಿಕ ಟ್ರಸ್ಟ್(ರಿ), ಮಂಗಳೂರು ಮತ್ತು ಕುತೂಹಲ ಕಲರವ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಚಿತ್ರ-ಕವನ ಸ್ಪರ್ಧೆಯನ್ನು ಏರ್ಪಡಿಸಿದೆ.ಭಾಗವಹಿಸಲಿಚ್ಚಿಸುವ ಸ್ಪರ್ಧಾರ್ಥಿಗಳು ಯಾವುದಾದರೂ ವಸ್ತು-ವಿಷಯವನ್ನಿಟ್ಟುಕೊಂಡು ಕವನವನ್ನು ರಚಿಸಬೇಕು. ಕವನಕ್ಕೆ ಪೂರಕವಾದ ಫೋಟೋ ಜೊತೆಗಿರಬೇಕು. ಫೋಟೋಗೆ ಪೂರಕವಾಗಿ ಕವನ ನಿರೂಪಿಸಲ್ಪಟ್ಟಿರಬೇಕು.ಸ್ಪರ್ಧೆ ಎರಡು ಹಂತಗಳಲ್ಲಿ ನಡೆಯಲಿದ್ದು, ಒಂದರಿಂದ ಹತ್ತನೇ ತರಗತಿಯವರೆಗೆ ಪ್ರಾಥಮಿಕ ವಿಭಾಗ ಮತ್ತು ಪಿಯುಸಿ ಮೇಲ್ಪಟ್ಟವರು ಪ್ರೌಢ ವಿಭಾಗದಲ್ಲಿ ಭಾಗವಹಿಸಬಹುದಾಗಿದೆ. ಚಿತ್ರ+ಕವನ ಕಳುಹಿಸಲು ಜುಲೈ15 ಕೊನೆಯ ದಿನಾಂಕವಾಗಿದ್ದು, ಯಾವುದೇ ಕೃತಿಚೌರ್ಯಕ್ಕೆ ಅವಕಾಶವಿಲ್ಲ. ನಿಮ್ಮ ಚಿತ್ರ+ಕವನಗಳನ್ನು 7022824146 ಸಂಖ್ಯೆಗೆ ವಾಟ್ಸಾಪ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ‘ದರ್ಪಣ ಇದು ಅರಿವಿನ ದೀವಿಗೆ’ ಫೇಸ್ಬುಕ್ ಪುಟಕ್ಕೆ ಭೇಟಿ ನೀಡಿ….







