ಬೆಳ್ತಂಗಡಿ: ಚಾರ್ಮಾಡಿ ಪೋಲೀಸ್ ಚೆಕ್ಪೋಸ್ಟ್ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮವು ಜುಲೈ 8ರಂದು ನಡೆಯಿತು. ಎಸ್ಕೆಡಿಆರ್ಡಿಪಿಯ ಶೌರ್ಯ ವಿಪತ್ತು ಘಟಕ ಚಾರ್ಮಾಡಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಮುಂಡಾಜೆ ಸಿ. ಎ. ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ್ ನಾರಾಯಣರಾವ್, ಧರ್ಮಸ್ಥಳ ಪೊಲೀಸ್ ಠಾಣೆಯ ಸುಕನ್ಯಾ ರಾಮಯ್ಯ ಹೆಗಡೆ, ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೊರಗಪ್ಪ ಗೌಡ, ಅರಣ್ಯ ರಕ್ಷಕ ಸಂತೋಷ್, ವಿವಿಧ ಒಕ್ಕೂಟಗಳ ಮೇಲ್ವಿಚಾರಕರು, ಅಧ್ಯಕ್ಷರು, ಸದಸ್ಯರು ಹಾಗೂ ವಿಪತ್ತು ನಿರ್ವಹಣಾ ತಂಡದವರು, ಪೋಲಿಸ್ ಚೆಕ್ಪೋಸ್ಟ್ ಸಿಬಂದಿ ಈ ಸತ್ಕಾರ್ಯದಲ್ಲಿ ಭಾಗವಹಿಸಿದ್ದರು.ದಿನೇಶ್ ಚಾರ್ಮಾಡಿ ಕಾರ್ಯಕ್ರಮ ನಿರೂಪಿಸಿದರು.







