ಬೆಳ್ತಂಗಡಿ: SKSSF ಬೆಳ್ತಂಗಡಿ ವಲಯ ಮಡಂತ್ಯಾರು ಕ್ಲಸ್ಟರ್ ವಿಖಾಯ ವತಿಯಿಂದ
ಮಡಂತ್ಯಾರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಸ್ವಚ್ಛತೆ, ಫಾಗಿಂಗ್(ಹೊಗೆ ಸಿಂಪಡಣೆ) ಮತ್ತು ಸ್ಯಾನಿಟೈಸರಿಂಗ್ ಕಾರ್ಯಕ್ರಮ ಜುಲೈ 12 ರಂದು ಹಮ್ಮಿಕೊಳ್ಳಲಾಯಿತು. SKSSF ಮಡಂತ್ಯಾರು ಕ್ಲಸ್ಟರ್ ಅಧ್ಯಕ್ಷರಾದ ಹಾಶಿಂ ಫೈಝಿ ಪಾಂಡವರಕಲ್ಲು (ದುಹಃ) ಈ ಸತ್ಕಾರ್ಯಕ್ಕೆ ಚಾಲನೆ ನೀಡಿದರು. ಧೂಮಲಿಕೆ ಖತೀಬರಾದ ಅದಂ ಮುಸ್ಲಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. SKSSF ಬೆಳ್ತಂಗಡಿ ವಲಯ ಕೊಶಾಧಿಕಾರಿ ಹಕೀಂ ಬಂಗೇರಕಟ್ಟೆ, ಮಡಂತ್ಯಾರು ಕ್ಲಸ್ಟರ್ ಉಪಾಧ್ಯಕ್ಷ ಅಬೂಸ್ವಲಿಹ್ ಧೂಮಲಿಕೆ, ಕ್ಲಸ್ಟರ್ ಕಾರ್ಯದರ್ಶಿ ಶೆರೀಫ್ ಬಂಗೇರಕಟ್ಟೆ, ಕ್ಲಸ್ಟರ್ ಕೊಶಾದಿಕಾರಿ ಅಬ್ದುಲ್ ರಹೀಮಾನ್ ಬಂಗೇರಕಟ್ಟೆ, ವರ್ಕಿಂಗ್ ಕಾರ್ಯದರ್ಶಿ ರಹಿಮಾನ್ ಪುಂಜಾಲಕಟ್ಟೆ, ಕ್ಲಸ್ಟರ್ ವಿಖಾಯ ಉಸ್ತುವಾರಿ ಬಶೀರ್ ಬಳ್ಳಮಂಜ, ಸೀರಾಜ್ ಚಿಲಿಂಬಿ ಮದ್ದಡ್ಕ, SKSSF ವಿಖಾಯ ದಕ್ಷಿಣ ಕನ್ನಡ ಜಿಲ್ಲಾ ಕೌನ್ಸಿಲರ್ ಖಾದರ್ ಬಂಗೇರಕಟ್ಟೆ, SKSSF ಬೆಳ್ತಂಗಡಿ ವಲಯ ವರ್ಕೀಂಗ್ ಕಾರ್ಯದರ್ಶಿ ಕೌಸರ್ ಪುಂಜಲಕಟ್ಟೆ, SKSSF ವಿಖಾಯ ರಕ್ತದಾನಿ ಬಳಗ ಬೆಳ್ತಂಗಡಿ ವಲಯ ಉಸ್ತುವಾರಿ ಅಬೂಬ್ಕರ್ ಬಂಗೇರಕಟ್ಟೆ, SKSSF ಮಡಂತ್ಯಾರು ಕ್ಲಸ್ಟರ್ ವ್ಯಾಪ್ತಿಯ ಪುಂಜಾಲಕಟ್ಟೆ, ಬಂಗೇರಕಟ್ಟೆ, ಪಾಂಡವರಕಲ್ಲು , ಧೂಮಲಿಕೆ, ನೆಲ್ಲಿಗುಡ್ಡೆ ಶಾಖೆಗಳ ವಿಖಾಯ ಸದಸ್ಯರು ಹಾಗೂ ಕ್ಲಸ್ಟರ್ ವ್ಯಾಪ್ತಿಯ ಹಿರಿಯರು ಭಾಗವಹಿಸಿದ್ದರು. SKSSF ಜಿಲ್ಲಾ ಕೌನ್ಸಿಲರ್ ಶರೀಫ್ ಧೂಮಲಿಕೆ ಸ್ವಾಗತಿಸಿ ನಿರೂಪಣೆಗೈದರು.






