ಬೆಳ್ತಂಗಡಿ ಧರ್ಮಪ್ರಾಂತ್ಯದಿಂದ ಆಹಾರ ಮತ್ತು ಆರೋಗ್ಯ ಕಿಟ್ ವಿತರಣೆ

ಬೆಳ್ತಂಗಡಿ ಧರ್ಮಪ್ರಾಂತ್ಯದಿಂದ ಆಹಾರ ಮತ್ತು ಆರೋಗ್ಯ ಕಿಟ್ ವಿತರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ದೇವರ ಪ್ರೀತಿ ಅರಿಯಲು ಮನುಷ್ಯನ‌ ಮೂಲಕ‌ ಸಾಧ್ಯ. ಕೋವಿಡ್ ನಂತಹಾ ಸಾಂಕ್ರಾಮಿಕ ರೋಗ ನಿಯಂತ್ರಣ ಕೇವಲ ಸರಕಾರದಿಂದ ಮಾತ್ರ ಸಾಧ್ಯವಿಲ್ಲ. ಜನರ ಕಷ್ಟ ದುಃಖ ಅರಿತು ಸಂಘಸಂಸ್ಥೆಗಳು ಕೈ ಜೋಡಿಸಿದರೆ ಪಿಡುಗು ನಿವಾರಿಸಬಹುದಾಗಿದೆ. ಆ ಕೆಲಸವನ್ನು ಪ್ರಚಾರ ಬಯಸದೆ ನಮ್ಮ‌ ಧರ್ಮಪ್ರಾಂತ್ಯ ಮತ್ತು ಸಹ‌ಸಂಸ್ಥೆಗಳು ಮಾಡುತ್ತಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಲಾರೆನ್ಸ್ ಮುಕ್ಕುಯಿ ಹೇಳಿದರು.ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಶನ್, ಸಂತ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ, ಮಾತೃವೇಧಿ ಘಟಕ, ಪಿತೃವೇಧಿ ಘಟಕ, ಸೀರೋ ಮಲಬಾರ್ ಯೂತ್ ಮೂವ್‌ಮೆಂಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರಿತಾಸ್ ಇಂಡಿಯಾ ನವದೆಹಲಿ ಹಾಗೂ ಜರ್ಮನಿ, ಕ್ಯಾಥೋಲಿಕ್‌ ನಿಯರ್‌ ಈಸ್ಟ್ ವೆಲ್ಫೇರ್ ಎಸೋಸಿಯೇಶನ್ ಹಾಗೂ ಸ್ನೇಹಸಧನ ಮಂಗಳೂರು ಇವರ ಆರ್ಥಿಕ ನೆರವಿನೊಂದಿಗೆ ಜುಲೈ 14 ರಂದು ಜ್ಞಾನ ನಿಲಯ ಬೆಳ್ತಂಗಡಿಯಲ್ಲಿ ನಡೆದ ಕೋವಿಡ್ ಸಂಕಷ್ಟದಲ್ಲಿರುವ ಕುಟುಂಬಿಕರಿಗೆ ರೂಪಾಯಿ  12 ಲಕ್ಷ ಮೌಲ್ಯದ ಆಹಾರ ಕಿಟ್ ಹಾಗೂ ಮೆಡಿಕಲ್ ಕಿಟ್‌ಗಳ ಸಾಂಕೇತಿಕ ವಿತರಣೆ ನೆರವೇರಿಸಿದ ಬಳಿಕ ಎರಡು ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.ಕಾರ್ಯಕ್ರಮವನ್ನು ಪಟ್ಟಣ‌ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ. ಹೆಚ್. ಉದ್ಘಾಟಿಸಿ ಮಾತನಾಡುತ್ತಾ, ಕೋವಿಡ್‌ನಲ್ಲಿ ನಾವೆಲ್ಲರೂ ಮನೆಯೊಳಗೆ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾದರೂ ಮನಸ್ಸು ಬೇರೆಯವರಿಗಾಗಿ ತೆರೆದುಕೊಳ್ಳುವ ಅವಕಾಶ ಬಂತು. ಸಂಘಸಂಸ್ಥೆ ನೀಡುವ ನೆರವುಗಳ ಹಿಂದೆ ಬಡವರ ಸಂಕಷ್ಟಕ್ಕೆ ನೆರವು ಮತ್ತು ಹೋರಾಟಗಾರರಿಗೆ ಸಹಾಯ ಎಂಬ ಚಿಂತನೆ ಅಡಕವಾಗಿದೆ ಎಂದರು.ಕೆಎಸ್‌ಎಂಸಿಎ ಅಧ್ಯಕ್ಷ ಕೆ. ಕೆ. ಸೆಬಾಸ್ಟಿಯನ್ ಗೃಹರಕ್ಷಕ ದಳದವರಿಗೆ ಆಹಾರದ ಕಿಟ್ ವಿತರಿಸಿ‌ದರು. ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಆಶಾ ಕಾರ್ಯಕರ್ತರ ಮೇಲ್ವಿಚಾರಕಿ ಹರಿಣಿ,‌ ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಲಾಯಿಲ ಶುಭಕೋರಿದರು.ಫ್ಯಾಮಿಲಿ ಅಪೋಸ್ಟಲೇಟ್ ನಿರ್ದೇಶಕರ ವಂ. ಜೋಸೆಫ್ ಚೀರನ್, ವಿನ್ಸೆಂಟ್ ಡಿ‌. ಪಾವ್ಲ್ ಸೊಸೈಟಿಯ ಧರ್ಮಪ್ರಾಂತೀಯ ಅಧ್ಯಕ್ಷ ಪೌಲೋಸ್ ರಾಜನ್, ಪಿತ್ರು ವೇದಿ ಅಧ್ಯಕ್ಷ ಟೈಟಸ್, ಮಾತ್ರುವೇದಿ ಅಧ್ಯಕ್ಷೆ ಶೈನಿ ಮಾಳಿಯೇಕಲ್, ಎಸ್‌ವೈಎಮ್ ಅಧ್ಯಕ್ಷ ಪ್ರಮೋದ್, ಸ್ನೇಹ ಜ್ಯೋತಿ‌ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಮಂಜುಳಾ ಜಾನ್, ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪಿ. ಸಿ. ಸೆಬಾಸ್ಟಿಯನ್, ವಂದನೀಯ ಮ್ಯಾಥ್ಯೂ ತಾಝೇಕಾಟಿಲ್, ಮ್ಯಾಥ್ಯೂ ಅಂಬಾಟ್, ವಂದನೀಯ ಜೋಸೆಫ್ ಮಾಟ್ಟಂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸಿಸಿಲಿಯಾ ಮತ್ತು ಮಾರ್ಕ್ ಡಿ’ಸೋಜಾ ಪ್ರಾರ್ಥಿಸಿದರು.ಡಿಕೆಆರ್‌ಡಿಎಸ್ ನಿರ್ದೇಶಕ ವಂದನೀಯ ಬಿನೋಯಿ ಎ. ಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್   ಅಸೋಸಿಯೇಷನ್ ನಿರ್ದೇಶಕ ವಂದನೀಯ ಮ್ಯಾಥ್ಯೂ ವೆಟ್ಟಂತಡತ್ತಿಲ್ ಧನ್ಯವಾದ ಸಲ್ಲಿಸಿದರು.

Latest 5

Related Posts