ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿರುವ ಕೋವಿಡ್ ಸಂತ್ರಸ್ತರ ಚಿಕಿತ್ಸೆಗೆ ನೆರವಾಗಲು ಸಿಎಸ್‌ಆರ್ ಯೋಜನೆಯಡಿ ಒದಗಿಸಲಾದ 15 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಶಾಸಕ ಹರೀಶ್ ಪೂಂಜರವರು ಜುಲೈ 14ರಂದು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರಿಸಿದರು.ಬೆಳ್ತಂಗಡಿ ತಾಲೂಕಿನಲ್ಲಿರುವ ಕೋವಿಡ್ ಸಂತ್ರಸ್ತರ ಚಿಕಿತ್ಸೆಗಾಗಿ ಸಿಎಸ್‌ಆರ್ ಯೋಜನೆಯಡಿ 20ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಒದಗಿಸಿಕೊಡುವಂತೆ ಶಾಸಕ ಹರೀಶ್ ಪೂಂಜರವರು ಕಳೆದ ಮೇ ತಿಂಗಳ 29ರಂದು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ರವರಿಗೆ ಮನವಿ ನೀಡಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ ಸರಕಾರ ಸಿಎಸ್‌ಆರ್ ಯೋಜನೆಯಡಿ ತಾಲೂಕಿಗೆ 15ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಒದಗಿಸಿದ್ದು, ಶಾಸಕರು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾl ವಿದ್ಯಾವತಿಯವರ ಮೂಲಕ ಆಸ್ಪತ್ರೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಡಾl ಯೋಗೀಶ್, ಆಸ್ಪತ್ರೆಯ ನರ್ಸ್ ಜಾಯ್ಸ್ ಡಿ’ಸೋಜ, ಸಿಬ್ಬಂದಿ ಚಂದ್ರಶೇಖರ್, ಆರೋಗ್ಯ ರಕ್ಷಾ ಸಮಿತಿಯ ತುಕಾರಾಮ, ಯಶೋಧಾ ಲಾಯ್ಲ, ರಮೇಶ್ ಉಪಸ್ಥಿತರಿದ್ದರು.






