ಡಾ. ಶಾಂತಾರಾಮ ಪ್ರಭುಗಳಿಗೆ ಕುರಿಯ ಪ್ರಶಸ್ತಿ

ಡಾ. ಶಾಂತಾರಾಮ ಪ್ರಭುಗಳಿಗೆ ಕುರಿಯ ಪ್ರಶಸ್ತಿ
Facebook
Twitter
LinkedIn
WhatsApp

ಬೆಳ್ತಂಗಡಿ: ಎಡನೀರು ಶ್ರೀ ಕೇಶವಾನಂದ ಭಾರತೀ ಶ್ರೀಗಳವರ ಪ್ರಥಮ ಆರಾಧನಾಸ್ಮೃತಿ ಹಾಗೂ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ಪ್ರಥಮ ಚಾತುರ್ಮಾಸ್ಯ ಗೌರವಾರ್ಥ  ಉಜಿರೆಯ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪ  ಸಮಾರಂಭದಲ್ಲಿ ಹಿರಿಯ ಕಲಾವಿದ, ವಿದ್ವಾಂಸ ಡಾ. ನಿಟ್ಟೂರು ಶಾಂತಾರಾಮ ಪ್ರಭು ಅವರಿಗೆ  ಶ್ರೀ ಸಚ್ಚಿದಾನಂದ ಭಾರತೀಶ್ರೀಗಳವರು ಕುರಿಯ ಪ್ರಶಸ್ತಿ ಪ್ರಧಾನ ಗೈದರು.        ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಶಾಂತಾರಾಮ ಪ್ರಭು, ಕುರಿಯ ವಿಠಲ ಶಾಸ್ತ್ರಿಗಳು ಧರ್ಮಸ್ಥಳ ಮೇಳದ ಸಂಚಾಲಕರಾಗಿ, ಎರಡನೇ ವೇಷಧಾರಿಗಳಾಗಿ ಪ್ರಸಿದ್ಧಿ ಪಡೆದವರು. ಅವರು ಹುಟ್ಟಿದ ಊರು ಹಾಗೂ ಮನೆಗೆ ಔನ್ನತ್ಯ ತಂದುಕೊಟ್ಟವರು ಎಂದರು. ಕುರಿಯ ವಿಠಲ ಶಾಸ್ತ್ರೀ ಪ್ರತಿಷ್ಠಾನದ  ಸಂಚಾಲಕ ಉಜಿರೆ ಅಶೋಕ ಭಟ್, ಕೇಶವಾನಂದ ಭಾರತೀ ಶ್ರೀಗಳವರು ಭಾರತಾಂಭೆಯ ಹೃದಯವನ್ನು ತಟ್ಟಿದವರು.  ಇಂದು ಕಾವಿಗೆ ಬೆಲೆ  ಉಳಿದಿದ್ದರೆ ಅದು ಕೇಶವಾನಂದ ಭಾರತಿಯವರ ಭಿಕ್ಷೆ ಎಂದು ಕಂಚಿ ಸ್ವಾಮೀಜಿಗಳಿಂದ ಹೊಗಳಿಸಿಕೊಂಡವರು ಎಂದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರು  ಆಶೀರ್ವಚನಗೈದರು. ಡಾ. ಸಿಬಂತಿ ಪದ್ಮನಾಭ ಅಭಿನಂದನಾ ಭಾಷಣ ಮಾಡಿದರು. ಧರ್ಮಸ್ಥಳದ ಬಿ. ಭುಜಬಲಿ ಶುಭಾಶಂಸನೆಗೈದರು.  ಸಮಾರಂಭದ ಬಳಿಕ ‘ಗಂಗಾವತರಣ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ  ಖ್ಯಾತ ಕಲಾವಿದರ ಕೂಡುವಿಕೆಯಿಂದ ನಡೆಯಿತು.

Latest 5

Related Posts