ಟೈಲರ್ಸ್ ಎಸೋಸಿಯೇಷನ್‌ನಿಂದ ‘ಆಟಿಡೊಂಜಿ ದಿನ’

ಟೈಲರ್ಸ್ ಎಸೋಸಿಯೇಷನ್‌ನಿಂದ ‘ಆಟಿಡೊಂಜಿ ದಿನ’
Facebook
Twitter
LinkedIn
WhatsApp

ಬೆಳ್ತಂಗಡಿ: ಟೈಲರ್ಸ್ ಎಸೋಸಿಯೇಷನ್ ವಲಯ ಸಮಿತಿಗಳು ಜಿಲ್ಲಾ ಸಂಘದ ಆಧಾರ ಸ್ತಂಭಗಳು. ರಾಜ್ಯದಲ್ಲಿ 9500  ಸದಸ್ಯರಿದ್ದು, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವಲ್ಲಿ ಹಿಂದುಳಿದಿದ್ದೇವೆ. ವಲಯ ಪದಾಧಿಕಾರಿಗಳು ಸದಸ್ಯರನ್ನು ಸಂಪರ್ಕಿಸಿ, ಸೌಲಭ್ಯಗಳ ಮಾಹಿತಿ ನೀಡಬೇಕು. ಪ್ರತಿಯೊಬ್ಬರೂ ಸಂಘಟನೆಯಲ್ಲಿ  ತಮ್ಮನ್ನು ಸಕ್ರಿಯವಾಗಿ  ತೊಡಗಿಸಿಕೊಂಡು ಸಂಘಟನೆ ಭದ್ರ ಪಡಿಸುವ ಹೊಣೆ ನಮ್ಮದು.  ಕಾರ್ಯಚಟುವಟಿಕೆಗಳಿಗೆ ಎಲ್ಲರ ಸಹಕಾರ ಮುಖ್ಯ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಪ್ರಜ್ವಲ್ ಕುಮಾರ್  ನುಡಿದರು.                          ಅವರು ಆಗಸ್ಟ್ 3ರಂದು   ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ರಿ) ಉಜಿರೆ ವಲಯ ಸಮಿತಿ ವತಿಯಿಂದ ನಡೆದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡುತ್ತಿದ್ದರು. ಉಜಿರೆ ವಲಯ ಅಧ್ಯಕ್ಷೆ ವೇದಾವತಿ ಅಧ್ಯಕ್ಷತೆ ವಹಿಸಿ, ವರದಿ ಮಂಡಿಸಿ 2020-21ನೇ ವರ್ಷದಲ್ಲಿ ಕೊರೋನ ಸಂದರ್ಭದಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮಗಳಿಗೆ  ಸಹಕರಿಸಿದವರನ್ನು ಸ್ಮರಿಸಿ  ಸಂಘಟನೆಯ ಬೆಳವಣಿಗೆಗೆ ಎಲ್ಲರ ಸಹಕಾರ ಕೋರಿದರು.ಮುಖ್ಯಾತಿಥಿಗಳಾಗಿ ಭಾಗವಹಿಸಿದ್ದ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ಅರ್ಚನಾ ಮಹಿಳಾ ಜಾಗೃತಿ ಕುರಿತು ಮಾತನಾಡಿ, ಕೋರೋನ 3ನೇ ಅಲೆಯ ಹಿನ್ನೆಲೆಯಲ್ಲಿ ಮಕ್ಕಳನ್ನು ಜಾಗ್ರತೆಯಾಗಿ ನೋಡಿಕೊಂಡು ರಕ್ಷಿಸುವುದು ಮಹಿಳೆಯರ ಜವಾಬ್ದಾರಿ. ರೋಗ ನಿರೋಧಕ ಶಕ್ತಿ ವೃದ್ಧಿಸಿ, ಬಿಸಿ ನೀರು ಸೇವಿಸಿ, ಅಂತರ ಕಾಯ್ದುಕೊಂಡು ಸೋಪ್ ನೀರಿನಿಂದ ಕೈತೊಳೆದುಕೊಂಡು ಸ್ವಚ್ಛತೆ  ಕಾಪಾಡಿಕೊಳ್ಳಬೇಕೆಂದು  ಮಾಹಿತಿ ನೀಡಿದರು. ಆರ್ಥಿಕ ಸಾಕ್ಷರತಾ ಕೇಂದ್ರದ  ಸಮಾಲೋಚಕಿ ಉಷಾ ವಿ. ನಾಯಕ್ ಸಾಮಾಜಿಕ ಭದ್ರತೆ ಬಗ್ಗೆ ಮಾಹಿತಿ ನೀಡುತ್ತಾ,  ಶುದ್ಧಗಾಳಿ, ನೀರು, ಆಹಾರ, ವಿಮೆ ಹಾಗು ಪಿಂಚಣಿ ಮೂಲಭೂತ ಅವಶ್ಯಕತೆಗಳು. ಸರಕಾರದ ಸೌಲಭ್ಯಗಳು, ಅಯುಷ್ಮಾನ್, ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ರೈತರು, ಅಸಂಘಟಿತ ಕಾರ್ಮಿಕರಿಗಾಗಿ  ವಿವಿಧ ಪಿಂಚಣಿ ಯೋಜನೆಗಳಿದ್ದು, ಸದಸ್ಯರು  ಸರಕಾರದ ಯೋಜನೆಗಳ ಪೂರ್ಣ ಪ್ರಯೋಜನ ಪಡೆಯಬೇಕು ಎಂದರು.  ಸದಸ್ಯರಿಗೆ ಸ್ಮಾರ್ಟ್‌ಕಾರ್ಡ್ ವಿತರಿಸಲಾಯಿತು.                ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಜಿಲ್ಲಾ ಸಮಿತಿ ಸದಸ್ಯ ಕುಶಾಲಪ್ಪ ಗೌಡ, ಬೆಳ್ತಂಗಡಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.  ಬೆಳ್ತಂಗಡಿ ಕ್ಷೇತ್ರ ಸಮಿತಿ ಅಧ್ಯಕ್ಷ  ರಾಘವ ಪುತ್ರನ್ ಸ್ವಾಗತಿಸಿ, ಕೋಶಾಧಿಕಾರಿ ಜಯಂತಿ ಚಿದಾನಂದ ನಿರೂಪಿಸಿ, ಶುಭಲತಾ ವಂದಿಸಿದರು. ಸದಸ್ಯರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಿತು. ಆಟಿ ತಿನಿಸುಗಳ  ಸಹಭೋಜನ ನಡೆಯಿತು.   

Latest 5

Related Posts