ಕಲ್ಮಂಜ ರೋಟರಿ ಸಮುದಾಯದಳ ಪದಗ್ರಹಣ

ಕಲ್ಮಂಜ ರೋಟರಿ ಸಮುದಾಯದಳ ಪದಗ್ರಹಣ
Facebook
Twitter
LinkedIn
WhatsApp

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿಯ ಅಂಗಸಂಸ್ಥೆಯಾದ ಕಲ್ಮಂಜ ರೋಟರಿ ಸಮುದಾಯ ದಳದ 2021-22 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸಿದ್ದಬೈಲು ಪರಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಕಲ್ಮಂಜ ರೋಟರಿ ಸಮುದಾಯ ದಳದ ನಿಕಟಪೂರ್ವ ಅಧ್ಯಕ್ಷೆ ಜಾನಕಿ ಗಣ್ಯರನ್ನು ಸ್ವಾಗತಿಸಿ, ಈ ಹಿಂದಿನ ಅವಧಿಯ ಕೆಲಸದ ಬಗ್ಗೆ ಮಾತನಾಡಿದರು. ನಿಕಟಪೂರ್ವ ಕಾರ್ಯದರ್ಶಿ ದಿನೇಶ್ ಗೌಡ ಮಾತನಾಡಿ, ಕೊರೋನಾದ ಸಂಕಷ್ಟದ ಸಂದರ್ಭದಲ್ಲೂ ಕೈಗೊಂಡ ಸನಾಜಮುಖಿ ಕಾರ್ಯಕ್ರಮಗಳ ಬಗ್ಗೆ ವರದಿ ಮಂಡಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಶರತ್‌ಕೃಷ್ಣ ಪಡುವೆಟ್ಣಾಯ ಅವರ ಹುಟ್ಟಿದ ಹಬ್ಬವನ್ನು ಕೇಕ್ ಕತ್ತರಿಸುವ ಮುಖಾಂತರ ಆಚರಿಸಲಾಯಿತು. ಅನಂತರ ಮಾತನಾಡಿದ ಶರತ್‌ಕೃಷ್ಣ ಪಡುವೆಟ್ಣಾಯ, ಕಲ್ಮಂಜ ರೋಟರಿ ಸಮುದಾಯದಳದ ನೂತನ ಅಧ್ಯಕ್ಷರಾದ ಕೃಷ್ಣಮೂರ್ತಿ ಹೆಬ್ಬಾರವರಿಗೆ ಶುಭಹಾರೈಸಿದರಲ್ಲದೇ, ಬೆಳ್ತಂಗಡಿ ರೋಟರಿ ಕ್ಲಬ್ ಎಲ್ಲ ಸಮಾಜಮುಖೀ ಕಾರ್ಯಗಳಲ್ಲಿ ರೋಟರಿ ಸಮುದಾಯದಳದ ಜೊತೆಗಿರುತ್ತದೆ ಎಂದರು. ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಅಬೂಬಕರ್, ಹಿಂದಿನ‌ ಅವಧಿಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ರೋಟರಿ ಸಮುದಾಯದದಳದ ವೈಸ್‌ಚಯರ್‌ಮ್ಯಾನ್ ಯಶವಂತ್ ಪಟವರ್ದನ್ ರವರು ವಾರ್ಷಿಕ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದರು. ರೋಟರಿ ಸಮುದಾಯದಳದ ನಿರ್ದೇಶಕರಾದ ಕಜೆ ವೆಂಕಟೇಶ್ವರ ಭಟ್ ಮಾತನಾಡಿ ಶುಭಹಾರೈಸಿದರು. ಕೊವಿಡ್ ಸಂದರ್ಭ ವಿಶೇಷವಾಗಿ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ, ಅರೋಗ್ಯ ಸಹಾಯಕರಿಗೆ ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯಿಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಸಿದ ಧರಿತ್ರಿ ಹಾಗೂ ಮನೀಷಾರವರಿಗೆ ರೋಟರಿ ಸಮುದಾಯದಳದಿಂದ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್‌ನ ಸದಸಗಯರಾದ ಮೇಜರ್ ಎಂ. ವಿ. ಭಟ್, ಆಡೂರ್ ವೆಂಕಟ್ರಾಯ, ದಿಶಾ ಅರುಣ್ ಕುಮಾರ್; ಅರವಿಂದ ಕಾರಂತ್, ಶ್ರೀನಿವಾಸ ರಾವ್ ಕಲ್ಮಂಜ, ಧನಂಜಯ ಭಿಡೆ, ಹಾಗೂ ಊರಿನ ಗಣ್ಯರು ಉಪಸ್ಥಿತಿಯರಿದ್ದರು. ಧರಿತ್ರಿ ಹಾಗೂ ಹಂಶಿನಿಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನೂತನ ಕಾರ್ಯದರ್ಶಿಯವರು ವಂದಿಸಿದರು. ರೊಟರಿ ಸಮುದಾಯದಳದ ಸದಸ್ಯೆ ವಸಂತಿಯವರು ಕಾರ್ಯಕ್ರಮ ನಿರೂಪಿಸಿದರು.

Latest 5

Related Posts