ಸ್ಕ್ರೀನ್ ಪ್ಲೇ ರೈಟಿಂಗ್ – ಸಿನಿಮಾಟೊಗ್ರಫಿ – ಡೈರೆಕ್ಷನ್ ರಾಜ್ಯ ಮಟ್ಟದ ಕಾರ್ಯಾಗಾರ ಸಮಾರೋಪ ಸಮಾರಂಭ

ಸ್ಕ್ರೀನ್ ಪ್ಲೇ ರೈಟಿಂಗ್ – ಸಿನಿಮಾಟೊಗ್ರಫಿ – ಡೈರೆಕ್ಷನ್ ರಾಜ್ಯ ಮಟ್ಟದ ಕಾರ್ಯಾಗಾರ ಸಮಾರೋಪ ಸಮಾರಂಭ
Facebook
Twitter
LinkedIn
WhatsApp

ಬೆಳ್ತಂಗಡಿ : ಶ್ರೀ ಗುರುಮಿತ್ರ ಸಮೂಹ ಬೆಳ್ತಂಗಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಬೋಧಿ ಪ್ರೊಡಕ್ಷನ್ಸ್ ಮುಂಬೈ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 1ರಿಂದ 12ರವರೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಆಯೋಜಿಸಲಾದ ಸ್ಕ್ರೀನ್ ಪ್ಲೇ ರೈಟಿಂಗ್ -ಸಿನಿಮಾಟೊಗ್ರಫಿ -ಡೈರೆಕ್ಷನ್ ವಿಷಯದ ಬಗ್ಗೆ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾರೋಪವು ಅಕ್ಟೋಬರ್ 12ರಂದು ನೆರವೇರಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ಬಿ. ವೋಕ್ ವಿಭಾಗದ ಮುಖ್ಯಸ್ಥರಾದ ಡಾ. ರವಿಶಂಕರ್ ಮಾತನಾಡುತ್ತಾ ಹನ್ನೆರಡು ದಿನಗಳ ಕಾರ್ಯಾಗಾರದಲ್ಲಿ ಪಡೆದ ಅನುಭವ, ಜ್ಞಾನ ಸಮಾಜಮುಖೀ ವಿಚಾರಗಳನ್ನು ಆಯ್ದುಕೊಂಡು ಜೀವನದಲ್ಲಿ ಮುಂದೆ ಸಾಗಲು ಸ್ಫೂರ್ತಿಯಾಗಲಿ ಎಂದು ಶುಭಹಾರೈಸಿದರು. ಸುವೀರ್ ಜೈನ್ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದರ ಜೊತೆಗೆ ಬಣ್ಣದ ಲೋಕದ ಬಗ್ಗೆ ಆಸಕ್ತಿ ಇದೆ. ಆದರೆ ಹಿಂದೆ ಇಂಥ ಅವಕಾಶಗಳಾಗಲಿ, ಶೈಕ್ಷಣಿಕ ಚೌಕಟ್ಟಾಗಲಿ ಇರಲಿಲ್ಲ. ಈ ವಿಚಾರದಲ್ಲಿ ಕಾರ್ಯಾಗಾರದಲ್ಲಿ ಪಾಲ್ಗೊಂಡವರು ಭಾಗ್ಯವಂತರು. ಕಾರ್ಯಾಗಾರದ ಕೊನೆ ಎಂದರೆ ನಿಜವಾದ ಕಲಿಕೆ ಆರಂಭವಾಗಿದೆ ಎಂದರ್ಥ ಎಂದು ಹೇಳಿದರು. ಹನ್ನೆರಡು ದಿನಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಫಿಲ್ಮ್ ಏಂಡ್ ವೀಡಿಯೋ ಟೆಕ್ನೋಲಜಿ ಪುಣೆ ಇದರ ವ್ಯವಸ್ಥಾಪಕ ನಿರ್ದೇಶಕ ಎಂ. ಕೆ. ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.ಶ್ರೀ ಗುರು ಮಿತ್ರ ಸಮೂಹ ಇದರ ಪೂರ್ವಾಧ್ಯಕ್ಷೆ ಸುಜಾತ, ಅಶ್ವಿತ್ , ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ವೇಣೂರು ಶುಭಕೋರಿದರು.ಕಾರ್ಯಾಗಾರದಲ್ಲಿ 6ತಂಡಗಳ 2 ನಿಮಿಷದ ಶಾರ್ಟ್ ಫಿಲ್ಮ್ ಸ್ಪರ್ಧೆ ಏರ್ಪಡಿಸಿದ್ದು; ಉತ್ತಮ ನಿರ್ದೇಶಕ, ಉತ್ತಮ ಕ್ಯಾಮೆರಾಮೆನ್, ಉತ್ತಮ ಸ್ಕ್ರೀನ್ ರೈಟರ್, ಉತ್ತಮ ಸಂಗೀತ ಇತ್ಯಾದಿ ಅವಾರ್ಡ್ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಯಿತು.ಅಶ್ವಿತ್, ಪ್ರದೀಪ್, ಮಾಧವ, ಅಶ್ವಿನಿ ಮುಂತಾದವರು ಉಪಸ್ಥಿತರಿದ್ದರು. ಚಂದ್ರಹಾಸ್ ಕಾರ್ಯಕ್ರಮ ನಿರೂಪಿಸಿ ಶ್ರೀ ಗುರು ಮಿತ್ರ ಸಮೂಹ ಬೋಧಿ ಪ್ರೊಡಕ್ಷನ್ ಸಂಘಟಕ ಸ್ಮಿತೇಶ್ ಬಾರ್ಯ ವಂದಿಸಿದರು.

Latest News

Related Posts