ಎಕ್ಸೆಲ್ ಪದವಿಪೂರ್ವ ಕಾಲೇಜು, ಗುರುವಾಯನಕೆರೆ;ಪ್ರಥಮ ಬ್ಯಾಚಿನಲ್ಲೇ ಅತ್ಯುತ್ತಮ ಫಲಿತಾಂಶ;ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದ ಆಗ್ನೇಯ. ಡಿ.ಎ

ಎಕ್ಸೆಲ್ ಪದವಿಪೂರ್ವ ಕಾಲೇಜು, ಗುರುವಾಯನಕೆರೆ;ಪ್ರಥಮ ಬ್ಯಾಚಿನಲ್ಲೇ ಅತ್ಯುತ್ತಮ ಫಲಿತಾಂಶ;ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದ ಆಗ್ನೇಯ. ಡಿ.ಎ
Facebook
Twitter
LinkedIn
WhatsApp

ಬೆಳ್ತಂಗಡಿ. ಜೂ 18: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಗುರುವಾಯನಕೆರೆ ಎಕ್ಸೆಲ್ ಪ. ಪೂ ಕಾಲೇಜು ತನ್ನ ದ್ವಿತೀಯ ಪಿಯುಸಿ ಯ ಪ್ರಥಮ ಬ್ಯಾಚಿನಲ್ಲೇ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರಥಮ ಬ್ಯಾಚ್ ಫಲಿತಾಂಶದಲ್ಲೇ ರಾಜ್ಯಮಟ್ಟದಲ್ಲಿ 4 ನೆಯ ರಾಂಕ್ ದಾಖಲಿಸಿದೆ. ವಿಜ್ಞಾನ ವಿಭಾಗದ ಆಗ್ನೇಯ ಡಿ. ಎ ನಾಲ್ಕು ವಿಷಯಗಳಲ್ಲಿ ತಲಾ 100 ಅಂಕ ಗಳನ್ನು ಗಳಿಸುವುದರೊಂದಿಗೆ ಒಟ್ಟು 595 ಅಂಕ ಗಳಿಸಿ ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.ಹಾಗೆಯೇ ದೀಕ್ಷಾ.ಬಿ.ಎಸ್ 593 ಮತ್ತು ಉಜ್ವಲಾ. ಎನ್.ಕೆ 592 ಅಂಕ ಪಡೆದು ಸಂಸ್ಥೆಗೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ.ಒಟ್ಟು 257 ವಿದ್ಯಾರ್ಥಿಗಳಲ್ಲಿ 33 ವಿದ್ಯಾರ್ಥಿಗಳು 95 ಶೇಕಡಾಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ.70ವಿದ್ಯಾರ್ಥಿಗಳು 90 ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 155 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 95 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಯಲ್ಲಿ ತೇರ್ಗಡೆ ಹೊಂದಿದ್ದಾರೆ. 2 ವಿದ್ಯಾರ್ಥಿಗಳು 4 ವಿಷಯಗಳಲ್ಲಿ, ಐದು ವಿದ್ಯಾರ್ಥಿಗಳು 3 ವಿಷಯಗಳಲ್ಲಿ,19 ವಿದ್ಯಾರ್ಥಿಗಳು 2 ವಿಷಯಗಳಲ್ಲಿ ಹಾಗೂ 50 ವಿದ್ಯಾರ್ಥಿಗಳು ತಲಾ ಒಂದು ವಿಷಯದಲ್ಲಿ ನೂರು ಅಂಕ ಪಡೆದಿದ್ದಾರೆ. ಕಾಲೇಜು ಒಟ್ಟು 99.61ಶೇಕಡಾ ಅಂಕ ದಾಖಲಿಸಿದೆ.ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಹಾಗೂ ಇತರ ಪದಾಧಿಕಾರಿಗಳು, ಪ್ರಾಧ್ಯಾಪಕ ವೃಂದ ಅಭಿನಂದಿಸಿದ್ದಾರೆ.

Latest 5

Related Posts