ಅಪರಿಚಿತ ವ್ಯಕ್ತಿಯ ಶವ ಬಾವಿಯಲ್ಲಿ ಕೊಳೆತ ಪತ್ತೆ

ಅಪರಿಚಿತ ವ್ಯಕ್ತಿಯ ಶವ ಬಾವಿಯಲ್ಲಿ ಕೊಳೆತ ಪತ್ತೆ
Facebook
Twitter
LinkedIn
WhatsApp

ಬೆಳ್ತಂಗಡಿ: ಉಜಿರೆ ಗ್ರಾಮದ ನಾಗರಾಜ್ ಕಾಂಪೌಂಡ್‌ನ ಶಂಕರ್ ಶೆಟ್ಟಿ ಎಂಬವರ ಮನೆಯ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಜೂನ್ 19ರಂದು ಪತ್ತೆಯಾಗಿದೆ.ಮೈಸೂರಿನಲ್ಲಿ ಹೊಟೇಲ್ ಹೊಂದಿರುವ ಉದ್ಯಮಿಯಾಗಿರುವ ಉಜಿರೆ ಗ್ರಾಮದ ನಾಗರಾಜ್ ಕಾಂಪೌಂಡ್ ನಿವಾಸಿ ಶಂಕರ್ ಶೆಟ್ಟಿ ಮತ್ತು ಕುಟುಂಬ ಮೈಸೂರಿನಲ್ಲಿ ವಾಸ್ತವ್ಯ ಇರುವುದು; ರಜೆ ಇರುವ ಸಂದರ್ಭ ಉಜಿರೆ ಮನೆಗೆ ಬಂದು ಹೋಗುತ್ತಿದ್ದರು.ಜೂನ್ 19ರಂದು ಶಂಕರ್ ಶೆಟ್ಟಿ ಮನೆಯ ಕಾಂಪೌಂಡ್ ಒಳಗಿನಿಂದ ದುರ್ವಾಸನೆ ಬರುತ್ತಿತ್ತು ಎನ್ನಲಾಗಿದ್ದು, ಪಕ್ಕದ ಮನೆಯ ನಿವಾಸಿ ಶ್ರೀಧರ್ ಗೌಡ ಎಂಬವರು ಬಂದು ಸುತ್ತಮುತ್ತ ಪರಿಶೀಲನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಬಾವಿಯ ಒಳಗಡೆಯಿಂದ ತುಂಬ ದುರ್ವಾಸನೆ ಬರುತ್ತಿತ್ತು ಎನ್ನಲಾಗಿದ್ದು; ಹೋಗಿ ನೋಡಿದಾಗ ವ್ಯಕ್ತಿಯೊಬ್ಬರ ಶವ ಕಂಡಿದ್ದಾರೆ ಎಂದು ಹೇಳಲಾಗುತ್ತಿದೆ. ತಕ್ಷಣ ಮನೆಯ ಮಾಲೀಕ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ನಂತರ ಮುಳುಗು ತಜ್ಞರಾದ ಗಾಂಧಿನಗರದ ಶಿಯಾಬ್, ಸಂಜಯನಗರ ಇಸ್ಮಾಯಿಲ್, ಕುಂಟಿನಿ ರಝಕ್, ಕುಂಟಿನಿ ರಫೀಕ್ ಅವರನ್ನು ಕರೆಸಿ ಶವ ಮೇಲಾಕ್ಕೆತ್ತಿದ್ದಾರೆ. ಶವ ಗಂಡಸಿನದ್ದಾಗಿದ್ದು ಬಲ ಕೈಯಲ್ಲಿ ‘ಮಂಜುಳಾ’ ಎಂಬುವುದಾಗಿ ಟ್ಯಾಟು ಹಾಕಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಶವ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest News

Related Posts