ಹಣ್ಣಿನ ಗಿಡನೆಟ್ಟು ವನಮಹೋತ್ಸವ

ಹಣ್ಣಿನ ಗಿಡನೆಟ್ಟು ವನಮಹೋತ್ಸವ
Facebook
Twitter
LinkedIn
WhatsApp

ಬೆಳ್ತಂಗಡಿ: ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನಲ್ಲಿ ಶೌರ್ಯ ಶ್ರೀಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸಹಯೋಗದೊಂದಿಗೆ ಸೇಕ್ರೆಡ್ ಹಾರ್ಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂ ಸೇವಕರು ಅತ್ಯಂತ ಉಪಯುಕ್ತವಾದ ಫಲ ಕೊಡುವ ಹಣ್ಣು ಹಂಪಲುಗಳ ಗಿಡಗಳನ್ನು ಕಾಲೇಜಿನ ಮೈದಾನದ ಸುತ್ತಲೂ ನೆಡುದರ ಮೂಲಕ ವನಮಹೋತ್ಸವ ಆಚರಿಸಿ, ಗಿಡ ಮರಗಳನ್ನು ನೆಟ್ಟು, ಪೋಷಿಸುವುದರ ಮಹತ್ವದ ಕುರಿತು ಇತರರಿಗೆ ಮಾದರಿಯಾದರು.ಈ ಸಂಧರ್ಭದಲ್ಲಿ ಸೇಕ್ರೆಡ್ ಹಾರ್ಟ್ ಸಂಸ್ಥೆಗಳ ಮಾನ್ಯ ಸಂಚಾಲಕರಾದ ವಂದನೀಯ ಬೇಸಿಲ್ ವಾಸ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್, ಶೌರ್ಯ ಶ್ರೀಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಸಿಬ್ಬಂದಿಗಳು, ರಾಷ್ಟೀಯ ಸೇವಾ ಯೋಜನೆಯ ಅಧಿಕಾರಿಗಳಾದ ಅರುಣ್ಜಾನ್ಸನ್ ಬ್ರಾಂಕೊ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕ-ಸೇವಕಿಯರು ಹಾಜರಿದ್ದರು.

Latest 5

Related Posts