ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ
Facebook
Twitter
LinkedIn
WhatsApp

ಬೆಳ್ತಂಗಡಿ: ಶ್ರೀ ಕೃಷ್ಣ ಭಜನಾ ಮಂಡಳಿ ಅದೂರ್ ಪೆರಲ್ ಕೊಯ್ಯೂರು ಇಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಮತ್ತು ಕೊಯ್ಯೂರು ಪ್ರೌಢಶಾಲೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕೊಯ್ಯೂರು ಇಲ್ಲಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಶ್ರೀಕೃಷ್ಣ ದೇವರಿಗೆ ವಿಶೇಷ ಭಜನಾ ಕಾರ್ಯಕ್ರಮ ಜರಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಊರಿನ ಹಿರಿಯರು ಪ್ರಗತಿಪರ ಕೃಷಿಕರು ಹಾಗೂ ಭಜನಾ ಮಂಡಳಿಯ ಪ್ರಧಾನ ಪೋಷಕರಾದ ಪ್ರಚಂಡ ಭಾನು ಭಟ್ ಮತ್ತು ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಮೋಹನ ಆಚಾರ್ಯ ಕೊಡ್ಯೆಲು ಇವರುಗಳು ಭಾಗವಹಿಸಿದ್ದರು.ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಲಿಂಗಪ್ಪ ಗೌಡ ಬೆರ್ಕೆ ಪ್ರಾರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಗೌರವ ಸಲಹೆಗಾರರಾದ ಪಿ. ಚಂದ್ರಶೇಖರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಅಧ್ಯಕ್ಷ ಶಶಿಕುಮಾರ್ ಕೆಂಪಗುಡ್ಡೆ, ಮಹಿಳಾ ಭಜನಾ ತಂಡದ ಅಧ್ಯಕ್ಷೆ ಮಾಲಿನಿ ಧನಂಜಯ ಕೋಡಿಯೆಲು, ಕೊಯ್ಯೂರು ಗ್ರಾಮ ಪಂಚಾಯತ್ ಸದಸ್ಯೆ ಚಂದ್ರಾವತಿ ಪುಂಡೈದಡಿ, ಮಂಡಳಿಯ ಮಾಜಿ ಅಧ್ಯಕ್ಷ ದಾಮೋದರ ಗೌಡ ಬೆರ್ಕೆ ಉಪಸ್ಥಿತರಿದ್ದರು ಭಜನಾ ಮಂಡಳಿಯ ಪದಾಧಿಕಾರಿಗಳಾದ ವಿಶ್ವನಾಥ ಗೌಡ ಬಚ್ಚಿರೆದಡಿ, ಹೇಮಂತ ಗೌಡ ದೆಂತ್ಸಾರುಬೊಟ್ಟು, ಬಾಲಕೃಷ್ಣ ಸಾಲಿಯಾನ್ ಆದರ್ಶ ನಗರ, ಮನೋಜ್ ಕುಮಾರ್ ಕಜೆ, ಓಬಯ್ಯ ನಾಯ್ಕ ಆದರ್ಶ ನಗರ, ಹೇಮಂತಗೌಡ ನಾಗನೋಡಿ, ಸುರೇಂದ್ರ ಗೌಡ ಬರೆಂಗಾಲ, ಕುಶಲಪ್ಪ ನಾಯ್ಕ ಕುಕ್ಕುದಡಿ ಮತ್ತು ಮಂಡಳಿಯ ಸದಸ್ಯರುಗಳಾದ ನಾರಾಯಣ್ ನಾಯ್ಕ ಪುಂಡೈದಲ್ಲಿ, ಶೇಖರಗೌಡ ಕೋರಿಯಾರು, ರಮೇಶ್ ಗೌಡ ಮಾವಿನ ಕಟ್ಟೆಯವರು ಸಹಕರಿಸಿದ ಈ ಕಾರ್ಯಕ್ರಮದಲ್ಲಿ ಪುಟಾಣಿಗಳು ಹಾಗೂ ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

Latest 5

Related Posts