ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಎಚಿವರ್ಸ್ ಡೇ ಕಾರ್ಯಕ್ರಮ ವಿದ್ಯಾರ್ಥಿಯು ಪದವಿಗಿಂತ ಮುಂದೆ ಕೈಗೊಳ್ಳುವ ಸಾಧನೆ ಮುಖ್ಯ: ಡಾ.ಹೆಗ್ಗಡೆ

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಎಚಿವರ್ಸ್ ಡೇ ಕಾರ್ಯಕ್ರಮ                                    ವಿದ್ಯಾರ್ಥಿಯು ಪದವಿಗಿಂತ ಮುಂದೆ ಕೈಗೊಳ್ಳುವ ಸಾಧನೆ ಮುಖ್ಯ: ಡಾ.ಹೆಗ್ಗಡೆ
Facebook
Twitter
LinkedIn
WhatsApp

ಬೆಳ್ತಂಗಡಿ; ಕಾಲೇಜಿನಲ್ಲಿ ಪದವಿ ಪಡೆಯುವುದಕ್ಕಿಂತ ಆ ಬಳಿಕದ ಜೀವನದಲ್ಲಿ, ವೃತ್ತಿ ಕ್ಷೇತ್ರದಲ್ಲಿ ತಾವಿರುವ ಸ್ಥಾನಮಾನದಲ್ಲಿ ಎಲ್ಲರೂ ಗುರುತಿಸಬಹುದಾದ ರೀತಿಯಲ್ಲಿ ಸಾಧನೆ ಮಾಡಬೇಕು. ಆ ನಿಟ್ಟಿನಲ್ಲಿ ಕಿರಿಯರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಈ ಸಾಧಕರ ಪ್ರಶಂಸನಾ ಕಾರ್ಯಕ್ರಮ ಆಯೋಜಿಸಿಕೊಂಡಿರುವುದು ಶ್ಲಾಘನೀಯ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಆಗಸ್ಟ್ 10ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇದರ ಅಂತಿಮ ಪದವಿ ವಿದ್ಯಾರ್ಥಿಗಳ ವಾರ್ಷಿಕ ಸಾಧಕರ ದಿನಾಚರಣೆ (ಎಚಿವರ್ಸ್ ಡೇ) ಹಾಗೂ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಕಾಲೇಜಿನ ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಡಾ.‌ ಡಿ. ವೀರೇಂದ್ರ ಹೆಗ್ಗಡೆಯವರನ್ನು, ಉಜಿರೆ ಕಾಲೇಜು ರಸ್ತೆಯನ್ನು ವರ್ಣಮಯವಾಗಿ ರಚಿಸುವಲ್ಲಿ ಸಹಕಾರ ನೀಡಿದ ಶಾಸಕ ಹರೀಶ್ ಪೂಂಜ, ಕಾಮನ್‌ವೆಲ್ತ್ ನಲ್ಲಿ ಭಾರ ಎತ್ತುವಿಕೆಯಲ್ಲಿ ಕಂಚಿನ ಪದಕ ಪಡೆದಿರುವ ಗುರುರಾಜ್ ಅವರನ್ನು ಸಮಾರಂಭದಲ್ಲಿ ಸಮ್ಮಾನಿಸಲಾಯಿತು.ಉಪನ್ಯಾಸಕ ಡಾ.‌ ಬಿ. ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕರಾದ ಡಾ. ನಫೀಸತ್ ಮತ್ತು ಡಾ.‌ ಚಿತ್ರಾ ಸಾಧಕರ ವಿವರ ನೀಡಿದರು. ಉಪನ್ಯಾಸಕಿ ಡಾ. ಶಲೀಫ್ ಕುಮಾರಿ ವಂದಿಸಿದರು.

Latest 5

Related Posts