ಮೂಡುಬಿದಿರೆ: ಆಗಸ್ಟ್ 15 ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ತಮ್ಮ 105ನೇ ಜನ್ಮ ದಿನೋತ್ಸವವನ್ನು ಆಚರಿಸಲಿರುವ ಹಿರಿಯ ಮುತ್ಸದ್ದಿ ಮಿಜಾರುಗುತ್ತು ಆನಂದ ಆಳ್ವರನ್ನು ಮೂಡುಬಿದಿರೆ ಲಯನ್ಸ್ ಕ್ಲಬ್ ವತಿಯಿಂದ ಅವರ ನಿವಾಸ ಹಂಸನಗರದ ‘ಶೋಭಾ ಗೆಸ್ಟ್ ಹೌಸ್’ನಲ್ಲಿ ಆಗಸ್ಟ್ 13ರಂದು ಸಮ್ಮಾನಿಸಲಾಯಿತು.ಹಿರಿಯ ಉದ್ಯಮಿ ಲ. ಕೆ. ಶ್ರೀಪತಿ ಭಟ್ ಅವರು ಆನಂದ ಆಳ್ವರಿಗೆ ಶಾಲು ಹೊದಿಸಿ, ಹಾರ, ಫಲಪುಷ್ಪ, ಸ್ಮರಣಿಕೆ ಮತ್ತು ರಾಷ್ಟ್ರಧ್ವಜ ನೀಡಿ ಗೌರವಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಎಂ.ಕೆ., ಕಾರ್ಯದರ್ಶಿ ರತ್ನಾಕರ ಎಂ. ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ವಿನೋದ್ ಡೇಸಾ, ವೆಂಕಟೇಶ್ ಪ್ರಭು, ಶಿವಪ್ರಸಾದ್ ಹೆಗ್ಡೆ, ಆಲ್ವಿನ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.






