ಲಯನ್ಸ್ ಪ್ರಾಂತ್ಯ ಸಮ್ಮೇಳನದ‌ ಸ್ಮರಣ ಸಂಚಿಕೆ ‘ಅಧೀಶ’ ಬಿಡುಗಡೆ

ಲಯನ್ಸ್ ಪ್ರಾಂತ್ಯ ಸಮ್ಮೇಳನದ‌ ಸ್ಮರಣ ಸಂಚಿಕೆ ‘ಅಧೀಶ’ ಬಿಡುಗಡೆ
Facebook
Twitter
LinkedIn
WhatsApp

ಬೆಳ್ತಂಗಡಿ: ಲಯನ್ಸ್ ಕ್ಲಬ್ ಸಮಾಜದ ಎಲ್ಲ ವರ್ಗದ ಜನರ ಕಷ್ಟ ಕಾರ್ಪಣ್ಯಗಳಿಗೆ ಕಿವಿ,‌ ಕಣ್ಣಾಗಿ, ಕೈಯ್ಯಾಗಿ ಕೆಲಸ ಮಾಡುತ್ತದೆ. ಕಳೆದ ಬಾರಿ ಅತ್ತುತ್ತಮ ಸೇವೆಯೊಂದಿಗೆ ಪ್ರಾಂತ್ಯ 10ನ್ನು ಮುನ್ನಡೆಸಿದ್ದ ಧರಣೇಂದ್ರ ಕುಮಾರ್ ಜೈನ್ ಅವರು ತನ್ನ ‘ಬೆಳ್ಳಿ’ ಪ್ರಾಂತ್ಯ ಸಮ್ಮೇಳನದ ಮೂಲಕ ಸ್ಮರಣ ಸಂಚಿಕೆ ತಯಾರಿಸಿ ಆ ಮೂಲಕ ಜಾಹೀರಾತಿನಿಂದ ಬಂದ ಹಣದಿಂದ ಮಾದರಿ ಶಾಶ್ವತ ಸೇವೆ ಅನುಷ್ಠಾನಿಸಿದ್ದಾರೆ ಎಂದು ಲಯನ್ಸ್ ಜಿಲ್ಲಾ ರಾಜ್ಯ ಪಾಲ ಸಂಜೀತ್ ಶೆಟ್ಟಿ ಸಕಲೇಶಪುರ ಹೇಳಿದರು.ಲಯನ್ಸ್ ಪ್ರಾಂತ್ಯ ಸಮ್ಮೇಳನದ ಸವಿನೆನಪಿಗಾಗಿ ಹೊರತಂದ ಸ್ಮರಣ ಸಂಚಿಕೆ ‘ಅಧೀಶ’ ಇದರ ಬಿಡುಗಡೆಯನ್ನು ಆಗಸ್ಟ್ 29ರಂದು ಉಜಿರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನೆರವೇರಿಸಿ‌ ಅವರು ಮಾತನಾಡುತ್ತಿದ್ದರು.ಅಧ್ಯಕ್ಷತೆಯನ್ನು ಲಯನ್ ಪ್ರಾಂತ್ಯಧ್ಯಕ್ಷ ಧರಣೇಂದ್ರ ಜೈನ್ ವಹಿಸಿದ್ದು ಕಾರ್ಯಕ್ರ‌ಮ ಸಂಯೋಜಿಸಿದರು.ಸ್ಮರಣ ಸಂಚಿಕೆ ಸಹಸಂಪಾದಕ ಅಶ್ರಫ್ ಆಲಿಕುಂಞಿ ಮುಂಡಾಜೆ ಸಂಚಿಕೆಯ ವಿವರ ನೀಡಿದರು. ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ನಿಕಟಪೂರ್ವ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ದ್ವಿತೀಯ ಉಪರಾಜ್ಯಪಾಲೆ ಡಾ. ಬಿ. ಎಮ್. ಭಾರತಿ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ದಕ್ಷಿಣ‌ ಕನ್ನಡ ಟ್ರಕ್ಕ್ ಮಾಲಕರ ಸಂಘದ ಅಧ್ಯಕ್ಷ ಸುನಿಲ್, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ದೇವಿಪ್ರಸಾದ್ ಬೊಳ್ಮ, ಮತ್ತಿತರರು ಉಪಸ್ಥಿತರಿದ್ದರು. ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು.ಸ್ಮರಣ ಸಂಚಿಕೆ ಸಮಿತಿ ಸಂಪಾದಕ ವಿನ್ಸೆಂಟ್ ಟಿ. ಡಿ’ಸೋಜಾ‌ ಮತ್ತು ಸಹ ಸಂಪಾದಕ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರನ್ನು ರಾಜ್ಯಪಾಲರು ಈ‌ ವೇಳೆ ಅಭಿನಂದಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ಮಮತಾ ಶೆಟ್ಟಿ ಪ್ರಾರ್ಥಿಸಿದರು. ಪ್ರಾಂತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿ ಪ್ರಸ್ತಾವಿಸಿದರು. ಕಾರ್ಯಾಧ್ಯಕ್ಷ ನಿತ್ಯಾನಂದ ನಾವರ ಧ್ವಜವಂದನೆ ನಡೆಸಿಕೊಟ್ಟರು. ಕಿರಣ್ ಕುಮಾರ್ ಶೆಟ್ಟಿ ನೀತಿ ಸಂಹಿತೆ ವಾಚಿಸಿದರು.ಕೋಶಾಧಿಕಾರಿ ರಾಜು ಶೆಟ್ಟಿ ಬೆಂಗೆತ್ಯಾರು ವಂದಿಸಿದರು.

Latest 5

Related Posts