ಡಿಕೆಆರ್‌ಡಿಎಸ್ – ಮಾಸಿಕ ಬೆಂಬಲ ಸಭೆ

ಡಿಕೆಆರ್‌ಡಿಎಸ್ – ಮಾಸಿಕ ಬೆಂಬಲ ಸಭೆ
Facebook
Twitter
LinkedIn
WhatsApp

ಬೆಳ್ತಂಗಡಿ: ಡಿಕೆಆರ್‌ಡಿಎಸ್ ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕಾರ್ಯಕ್ರಮ ಇದರ ನೇತೃತ್ವದಲ್ಲಿ ಸೆಪ್ಟೆಂಬರ್ 17ರಂದು ಹೆಚ್‌ಐವಿ ಸೋಂಕಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಸಾಂತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು. ಅತಿಥಿಗಳಾಗಿ ಆಗಮಿಸಿದ ಸೈಂಟ್ ಲಾರೆನ್ಸ್ ಚರ್ಚ್ ಬೆಳ್ತಂಗಡಿ ಇಲ್ಲಿನ ಸಂಡೆ ಸ್ಕೂಲ್ ಮುಖ್ಯ ಶಿಕ್ಷಕ ಕ್ಲಿಪ್ಪಿ ಪೌಷ್ಟಿಕ ಆಹಾರ ವಿತರಿಸಿ ಶುಭ ಹಾರೈಸಿದರು. ಸಿಎಮ್‌ಎಲ್ ಇದರ ಉಪ ನಿರ್ದೇಶಕರಾದ ಸಿಸ್ಟರ್ ಆಲ್ಫೋನ್ಸಾರವರು ಧನಾತ್ಮಕ ಚಿಂತನೆ ನಡೆಸಿ ಮಾನಸಿಕವಾಗಿ ಸದೃಢರಾಗಿ ಸಂತೋಷದಿಂದ ಇರಬೇಕು ಎಂಬ ಮಾತುಗಳ ಮೂಲಕ ಶುಭ ಹಾರೈಸಿದರು. ಸಿಎಮ್‌ಎಲ್ ಕಾರ್ಯಕರ್ತರಾಗಿ ಡೈಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವಚೈತನ್ಯ ಸಂಘದ ಅಧ್ಯಕ್ಷೆ ಲಲಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿಕೆಆರ್‌ಡಿಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಬಿನೋಯಿ ಎ.ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಕಾರ್ಯಕರ್ತೆ ಶಾರದಾ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಸಂಡೆ ಸ್ಕೂಲ್ ಮತ್ತು ಸಿಎಮ್‌ಎಲ್ ವತಿಯಿಂದ ಸೋಪ್, ಪೇಸ್ಟ್ ಹಾಗೂ ಬ್ರೆಷ್ ವಿತರಿಸಲಾಯಿತು. ಸಂಯೋಜಕಿ ಸಿಸಿಲ್ಯಾ ತಾವ್ರೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಾರ್ಕ್ ಡಿ ಸೋಜ ವಂದಿಸಿದರು.

Latest News

Related Posts