ಅ.9 ರಿಂದ 15 ಯೋಗಾಸನ-ಪ್ರಾಣಾಯಾಮ ಧ್ಯಾನ ಶಿಬಿರ

Facebook
Twitter
LinkedIn
WhatsApp

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಗಿನ್ನೆಸ್ ದಾಖಲೆ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಮೂಡುಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಕ್ಟೋಬರ್ 9ರಿಂದ 15ರವರೆಗೆ ನಗರ ಮತ್ತು ಹಳ್ಳಿ ಹಳ್ಳಿಗಳಲ್ಲಿ 80ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ಅನುಭವೀ ಯೋಗ ಶಿಕ್ಷಕರಿಂದ ಸಾರ್ವಜನಿಕರಿಗೆ ಯೋಗಾಸನ-ಪ್ರಾಣಾಯಾಮ ಮತ್ತು ಧ್ಯಾನ ಶಿಬಿರ ನಡೆಯಲಿದ್ದು, ಸರಕಾರದ ನಿಯಮದಂತೆ ಕೋವಿಡ್-19ನ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ, 15 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದು ಈ ಶಿಬಿರದ ಸಂಘಟಕರು ತಿಳಿಸಿದ್ದಾರೆ. ಅಂತೆಯೇ ಅಕ್ಟೋಬರ್ 10ರಿಂದ 14ರವರೆಗೆ ಮಕ್ಕಳ ಪಂಚಮುಖಿ ವ್ಯಕ್ತಿತ್ವ ವಿಕಸನ ಶಿಬಿರವು ಮೂಡುಬಿದಿರೆ ಕಡಲಕೆರೆಯ ಸಂತ ಇಗ್ನೇಶಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಶಿಬಿರದ ಅವಧಿ ಪ್ರತಿದಿನ ಪೂರ್ವಾಹ್ನ 9 ರಿಂದ ಸಂಜೆ 4ರವರೆಗೆ ಎಂದು ಶಿಬಿರದ ಸಂಘಟಕರು ತಿಳಿಸಿದ್ದಾರೆ.ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಸ್ಥಿತಿಗೆ ತಂದು ಸ್ವಸ್ಥ ಸಮಾಜವನ್ನು ನಿರ್ಮಿಸುವುದೇ ಶಿಬಿರಗಳ ಉದ್ದೇಶವಾಗಿದ್ದು, ಈ ಶಿಬಿರದಲ್ಲಿ ಬೆನ್ನುನೋವು, ತಲೆನೋವು, ಮೈಗ್ರೇನ್, ಶೀತ-ನೆಗಡಿ, ಮರೆವು, ರಕ್ತದ ಒತ್ತಡ, ಅಸ್ತಮಾ, ಮಂಡಿನೋವು ಹಾಗೂ ಸ್ಥೂಲಕಾಯ ಸಮಸ್ಯೆಗಳಿಗೂ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿರುವ ಸಂಘಟಕರು ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಶ್ರೀ ಕ್ಷೇತ್ರದ ವತಿಯಿಂದ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ.ಶಿಬಿರದ ಉದ್ಘಾಟನೆಯು ಅಕ್ಟೋಬರ್ 9ರಂದು ಪೂರ್ವಾಹ್ನ ಗಂಟೆ 11.00ಕ್ಕೆ ಬೆಳುವಾಯಿ ಕೆಸರ್‌ಗದ್ದೆಯ ಸುನಂದ ಮಾಧವ ಪ್ರಭು ಸಭಾಭವದಲ್ಲಿ ಜರಗಲಿದ್ದು, ಸಮಾರೋಪ ಸಮಾರಂಭವು ಅಕ್ಟೋಬರ್ 15ರಂದು ಪೂರ್ವಾಹ್ನ ಗಂಟೆ 11ಕ್ಕೆ ಪಾಲಡ್ಕ ಕಡಂದಲೆ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದಲ್ಲಿ ನಡೆಯಲಿದೆ ಎಂದು ಶಿಬಿರದ ಸಂಘಟಕರು ತಿಳಿಸಿದ್ದಾರೆ.

Latest 5

Related Posts