ಮೂಡುಬಿದಿರೆ: ಇಲ್ಲಿನ ಪ್ರತಿಷ್ಠಿತ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಮಿಡ್ಟೌನ್ ಇದರ ವತಿಯಿಂದ ಅಕ್ಟೋಬರ್ 28ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕ್ಲಬ್ ಸದಸ್ಯರೆಲ್ಲಾ ಜೊತೆ ಸೇರಿ ದೀಪಾವಳಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಸಮಾಜಮಂದಿರ ಸಭಾಭವನದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಯೋಗ ಗುರು, ನಿವೃತ್ತ ಶಿಕ್ಷಕಿ ಪ್ರಫುಲ್ಲಾ ಎಂ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಪ್ರಫುಲ್ಲಾ ಎಂ. ಶೆಟ್ಟಿಯವರು ತಮ್ಮ ಅನುಭವವನ್ನು ಹಂಚಿಕೊಂಡರು. ಕ್ಲಬ್ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕಿಶೋರ್ ಕೊಟ್ಟಾರಿ, ಟಿ.ಆರ್.ಎಫ್. ನಿರ್ದೇಶಕಿ ಚಂದ್ರಾವತಿ ಕೆ. ಭಂಡಾರಿ, ಸದಸ್ಯರುಗಳಾದ ರೇಖಾ ಭಂಡಾರಿ, ಪದ್ಮಾವತಿ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಕುಮಾರ್ ಪೂಜಾರಿ, ಸುಶಾಂತ್ ಕರ್ಕೇರಾ, ಪ್ರಶಾಂತ್ ಭಂಡಾರಿ, ಮಹೇಂದ್ರ ಕುಮಾರ್, ಸಂತೋಷ್ ಶೆಟ್ಟಿ, ಸ್ನೇಹಸ್ಪಂದನ, ವಿದೇಶ್, ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.






