ಪರಿಶಿಷ್ಟ ಕೊರಗಪ್ಪರಿಂದ ವಿಶಿಷ್ಟ ಪ್ರತಿಭಟನೆ ಮತ್ತು ಮನವಿ

ಪರಿಶಿಷ್ಟ ಕೊರಗಪ್ಪರಿಂದ ವಿಶಿಷ್ಟ ಪ್ರತಿಭಟನೆ ಮತ್ತು ಮನವಿ
Facebook
Twitter
LinkedIn
WhatsApp

ಮೂಡುಬಿದಿರೆ: ಪರಿಶಿಷ್ಟ ಜಾತಿಗೆ ಮೀಸಲಿರುವ ಮೂಡುಬಿದಿರೆ ಪುರಸಭೆಯ 16ನೇ ವಾರ್ಡಿಗೆ ಸೂಕ್ತ ಅನುದಾನವನ್ನು ಒದಗಿಸದೆ ಪರಿಶಿಷ್ಟರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿರಿರುವ ಪರಿಶಿಷ್ಟರ ನಾಯಕ ಪುರಸಭಾ ಸದಸ್ಯ ಕೊರಗಪ್ಪ ಅವರು ಶರ್ಟ್ ಬಿಚ್ಚಿ ವಿನೂತನ ಪ್ರತಿಭಟನೆ ನಡೆಸುವ ಜೊತೆಗೆ, ಸ್ವರಾಜ್ಯ ಮೈದಾನದ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಉದ್ಯಾನವನಕ್ಕೆ ಇತ್ತೀಚೆಗೆ ನಿಧನರಾಗಿರುವ ಗುರುಸ್ಬಾಮಿ ರಮೇಶ ಶಾಂತಿಯವರ ಹೆಸರಿಡುವಂತೆ ಪುರಸಭಾ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.ಇಂದು (ಅ. 31ರಂದು) ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಪರಿಶಿಷ್ಟರನ್ನು ಪುರಸಭಾಡಳಿತ ಕಡೆಗಣಿಸುತ್ತಿದೆ ಎಂದು ಆರೋಪಿಸಿದ ಕೊರಗಪ್ಪ ಅವರು ಸದನದ ಅಂಗಳಕ್ಕೆ ಇಳಿದು ಶರ್ಟ್ ಬಿಚ್ಚಿ ವಿಶಿಷ್ಟ, ವಿನೂತನ ರೀತಿಯಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ಮುಖ್ಯಾಧಿಕಾರಿ ಇಂದು ಎಂ., ಉಪಾಧ್ಯಕ್ಷೆ ಸುಜಾತಾ, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಸಹಿತ ಆಡಳಿತ ಮತ್ತು ವಿಪಕ್ಷದ ಸದಸ್ಯರೆಲ್ಲರೂ ಒಂದು ಕ್ಷಣ ಅವಾಕ್ಕಾದರು. ಹೋರಾಟದ ಛಾತಿಯನ್ನು ಎಂದಿಗೂ ಬಿಟ್ಟುಕೊಡದ ಕೊರಗಪ್ಪ ಅವರು ತಾವು ಆಡಳಿತ ಪಕ್ಷದಲ್ಲಿರಲಿ, ವಿಪಕ್ಷದಲ್ಲಿರಲಿ. ಸದಾ ಏರು ದನಿಯಲ್ಲೇ ಸದನದಲ್ಲಿ ವಾದಿಸುವ ಮೂಲಕ ಅವರು ತಮ್ಮ ಹೋರಾಟಕ್ಕೆ ಶಕ್ತಿ ತುಂಬುತ್ತಾ ಬಂದಿದ್ದಾರೆ.ಇದೀಗ ಇನ್ನೊಂದು ಹೆಜ್ಜೆ ಇಟ್ಟಿರುವ ಅವರು ಇತ್ತೀಚೆಗೆ ನಿಧನರಾದ ಹಿರಿಯ ಗುರುಸ್ವಾಮಿ ಮೂಡುಬಿದಿರೆ ಸ್ವರಾಜ್ಯ ಮಂದಿರ ಸಮೀಪದ ಶ್ರೀ ಮಣಿಕಂಠ ಕ್ಷೇತ್ರ, ಅಯ್ಯಪ್ಪ ದೇವಸ್ಥಾನದ ನಿರ್ಮಾತೃ ದಿ. ರಮೇಶ ಶಾಂತಿಯವರ ಹೆಸರನ್ನು ಸ್ವರಾಜ್ಯ ಮೈದಾನದ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಉದ್ಯಾನವನಕ್ಕೆ ಇಡಬೇಕು ಎಂದು ಆಗ್ರಹಿಸಿ ಪುರಸಭಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.ಮೂಡುಬಿದಿರೆಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಇರುವ ಗುರು ಮಂದಿರದಲ್ಲಿ ದಶಕಗಳ ಕಾಲ ಮುಖ್ಯಅರ್ಚಕರಾಗಿ ಯಾವುದೇ ಸಂಭಾವನೆ ಪಡೆಯದೇ ಸೇವೆ ಸಲ್ಲಿಸಿದ್ದ ದಿ. ರಮೇಶ ಶಾಂತಿಯವರು ಸ್ವರಾಜ್ಯ ಮೈದಾನದ ಹಿಂಭಾಗದಲ್ಲಿ ಖಾಲಿ ಇರುವ ಜಾಗದಲ್ಲಿ ಹಿರಿಯ ನಾಗರಿಕರ ಉದ್ಯಾನವನ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ಪ್ರಯತ್ನ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Latest 5

Related Posts