ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳಿಗೆ ಕಾನೂನುಬಾಹಿರವಾಗಿ ಅಳವಡಿಸಲಾದ ಅಲಂಕಾರಿಕ ಲೈಟ್ ಹಾಗೂ ಹೈಮಾಸ್ಟ್ ದಾರಿದೀಪದ ಕಂಬಕ್ಕೆ ಅಳವಡಿಸಲಾದ ಫ್ಲೆಕ್ಸ್ ಬಗ್ಗೆ ‘ಇನ್ನೆಷ್ಟು ಬಲಿ ಬೇಕು ಮೆಸ್ಕಾಂಗೆ ರಾಮಾ…’ ಶಿರೋನಾಮೆಯಲ್ಲಿ ಇಂದು (ಡಿಸೆಂಬರ್ 21) ಬೆಳಿಗ್ಗೆ ವರದಿ ಮಾಡಲಾಗಿತ್ತು.ವರದಿ ನೋಡಿದ ತಕ್ಷಣ ಕಾರ್ಯಕ್ರಮ ಸಂಘಟಕರನ್ನು ಸಂಪರ್ಕಿಸಿದ ಬೆಳ್ತಂಗಡಿ ಮೆಸ್ಕಾಂ ಅಧಿಕಾರಿಗಳು ಹೈಮಾಸ್ಟ್ ಬೀದಿದೀಪದ ಕಂಬಕ್ಕೆ ಅಳವಡಿಸಲಾಗಿದ್ದ ಫ್ಲಕ್ಸ್‌ನ್ನು ಮತ್ತು ವಿದ್ಯುತ್ ಕಂಬಗಳಿಗೆ ಕಟ್ಟಲಾಗಿದ್ದ ಅಲಂಕಾರಿಕ ಬಲ್ಬ್‌ಗಳ ವಯರನ್ನು ಸಂಘಟಕರಿಂದಲೇ ತೆರವುಗೊಳಿಸಿದರು. ಮೆಸ್ಕಾಂ ಅಧಿಕಾರಿಗಳ ಈ ಸಕಾಲಿಕ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.






