ಕನಸುಗಳು ಬೆಳವಣಿಗೆಗೆ ಸಹಕಾರಿ-ಮೋಹನ್‌ ಕುಮಾರ್‌

ಕನಸುಗಳು ಬೆಳವಣಿಗೆಗೆ ಸಹಕಾರಿ-ಮೋಹನ್‌ ಕುಮಾರ್‌
Facebook
Twitter
LinkedIn
WhatsApp

ಬೆಳ್ತಂಗಡಿ: ಉದ್ಯಮಿಗಳು ಕನಸುಗಳನ್ನು ಕಾಣಬೇಕು. ಆ ಕನಸುಗಳನ್ನು ನನಸಾಗಿಸುವ ಪ್ರಯತ್ನ ಮಾಡಬೇಕು. ಈ ಕನಸುಗಳು ನನಸಾಗಿಸಲು ಸಮಯ ಬೇಕು, ಅವಸರ ಮಾಡಬಾರದು; ತಾಳ್ಮೆ ಇರಬೇಕು. ನೀವು ಕಂಡ ಕನಸುಗಳು ನಿಮ್ಮನ್ನು ಬೆಳೆಸಲು ಸಹಕಾರಿಯಾಗುತ್ತದೆ. ನಿಮ್ಮ ಬದುಕಿನಲ್ಲಿ ಕಷ್ಟಗಳು ಬಂದಾಗ ಅದನ್ನು ಸವಾಲಾಗಿ ಸ್ವೀಕರಿಸಬೇಕು. ದುಂದು ವೆಚ್ಚಗಳಿಂದ ಮತ್ತು ದುಶ್ಚಟಗಳಿಂದ ದೂರ ಇರಬೇಕು. ನಿಮಗೆ ನೀವು ಮಾಡುವ ಸಾದನೆಗಳೇ ಮುಖ್ಯವಾಗಿರಬೇಕು. ರುಡ್‌ಸೆಟ್‌ ಸಂಸ್ಥೆಯಿಂದ ಅನೇಕ ನಿರುದ್ಯೋಗಿಗಳು ಸ್ವ ಉದ್ಯೋಗವನ್ನು ಮಾಡಿ ಉದ್ಯಮಿಗಳಾಗಿರುವುದು ತುಂಬಾ ಸಂತೋಷಕೊಟ್ಟಿದೆ ಎಂದು ಬದುಕು ಕಟ್ಟೋಣ ಬನ್ನಿ ಸಂಘಟನೆಯ ಸಂಚಾಲಕರು ಮತ್ತು ಉದ್ಯಮಿಗಳು ಆದ ಮೋಹನ್‌ ಕುಮಾರ್‌ ಹೇಳಿದರು.
ಅವರು ರುಡ್‌ಸೆಟ್‌ ಸಂಸ್ಥೆಯಲ್ಲಿ ನಡೆದ ಮೊಬೈಲ್‌ ರಿಪೇರಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡುತ್ತಿದ್ದರು. ರುಡ್‌ಸೆಟ್‌ ಸಂಸ್ಥೆಯ ನಿರ್ದೇಶಕ ಎಮ್‌. ಸುರೇಶ್‌ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ಕಛೇರಿ ಸಹಾಯಕಿ ರಶ್ಮಿ ವಂದಿಸಿದರು. 30 ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ 27 ಯುವಕರು ಭಾಗವಹಿಸಿದ್ದರು. ಕೆಲವು ಶಿಭಿರಾರ್ಥಿಗಳು ತರಬೇತಿಯ ಅನುಭವವನ್ನು ಹಂಚಿಕೊಂಡರು.

Latest News

Related Posts