ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ-2024 ಪ್ರಧಾನ.

ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ-2024 ಪ್ರಧಾನ.
Facebook
Twitter
LinkedIn
WhatsApp

ಬೆಳ್ತಂಗಡಿ: ಉಜಿರೆಯ ಎಸ್‌ಎಲ್‌ವಿ ಕನ್‌ಸ್ಟ್ರಕ್ಷನ್ಸ್‌ನ ಸಿವಿಲ್ ಇಂಜಿನಿಯರ್ ಸಂಪತ್‌ರತ್ನ ರಾವ್ ಅವರಿಗೆ ಮೇ 4ರಂದು ರಾಷ್ಟ್ರ ಮಟ್ಟದ ‘ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ-2024’ ಪ್ರಧಾನ ಮಾಡಲಾಯಿತು. ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಇದರ ಫೌಂಡರ್ಸ್ ಡೇ ಸಮಾರಂಭದಲ್ಲಿ ಮಹಾರಾಷ್ಟ್ರದ ನಾಸಿಕ್‌ನ ರಡಿಸ್ಸನ್ ಬ್ಲೂ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. . ಸಂಪತ್‌ರತ್ನ ರಾವ್ ಅವರು ಕಳೆದ 30 ವರ್ಷಗಳಿಂದ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಅತ್ಯುತ್ತಮ ಸೇವೆ ಮಾಡಿ ಸಮಾಜದ ಗೌರವಾದರಕ್ಕೆ ಪಾತ್ರರಾದ ಹಿನ್ನೆಲೆಯಲ್ಲಿ ಅವರಿಗೆ ವರ್ಷದ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನೀಯರ್ಸ್ (ಇಂಡಿಯಾ) ಅಧ್ಯಕ್ಷ ವಿಜಯ್ ಕೆ. ಸನಾಪ್, ಉಪಾಧ್ಯಕ್ಷರಾದ ಪುನೀತ್ ಡಿ. ರೈ ((ಪಶ್ಚಿಮ), ರಾಜಕುಮಾರ್ ಕಾಚರ್ಲಾ(ದಕ್ಷಿಣ), ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ ರಾವ್, ಕೋಶಾಧಿಕಾರಿ ಆರ್. ಶ್ರೀನಿವಾಸನ್, ಪ್ರಶಸ್ತಿ ಸಮಿತಿ ಅಧ್ಯಕ್ಷ ಸಂದೀಪ್ ಎಸ್. ಶಿರಖೇಡ್ಕರ್ ಮೊದಲಾದ ಗಣ್ಯ ಮಾನ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Latest 5

Related Posts