ಸೊಸೆಯಿಂದ ಹಲ್ಲೆ – ಜೀವಬೆದರಿಕೆ

ಸೊಸೆಯಿಂದ ಹಲ್ಲೆ – ಜೀವಬೆದರಿಕೆ
Facebook
Twitter
LinkedIn
WhatsApp

ಬೆಳ್ತಂಗಡಿ: ತಿಂಗಳ ಹಿಂದೆ ಪತಿ ಮತ್ತು ಪತಿಯ ಮನೆಯವರೊಂದಿಗೆ ಜಗಳವಾಡಿ, ದೊಡ್ಡ ಮಗನನ್ನು ಅಲ್ಲೇ ಬಿಟ್ಟು ಚಿಕ್ಕ ಮಗನನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದ ಸೊಸೆ ಮತ್ತೆ ದೊಡ್ಡ ಮಗನನ್ನು ಕರೆದುಕೊಂಡು ಹೋಗಲು ತನ್ನ ಸಹೋದರನೊಂದಿಗೆ ಪತಿಯ ಮನೆಗೆ ಬಂದು ಪತಿಯ ಮನೆಯಲ್ಲಿ ಗಲಾಟೆ ಮಾಡಿ, ಹಿರಿಯ ಜೀವಕ್ಕೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಮೂಡುಕೋಡಿ ಗ್ರಾಮದಲ್ಲಿ ಮೇ 7ರಂದು ವರದಿಯಾಗಿದೆ. ಬೆಳ್ತಂಗಡಿ ತಾಲೂಕು ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ನಿವಾಸಿ ವೆಂಕಟರಮಣ ಭಟ್ ಎಂಬವರೇ ಘಟನೆಯಲ್ಲಿ ಹಲ್ಲೆಗೊಳಗಾದವರಾಗಿದ್ದು; ಅವರ ಸೊಸೆ ಮೋಹನಾಕ್ಷಿ ಹಾಗೂ ಆಕೆಯ ಸಹೋದರ ಹೇಮೇಶ ಎಂಬವರೇ ಮನೆಗೆ ಬಂದು ಅವಾಚ್ಯವಾಗಿ ಬೈಯ್ದು ಹಲ್ಲೆಗೈದು ಜೀವ ಬೆದರಿಕೆಯೊಡ್ಡಿದವರು ಎಂದು ತಿಳಿದು ಬಂದಿದೆ.ಪ್ರಕರಣದ ಆರೋಪಿತೆ ಮೋಹನಾಕ್ಷಿ ಎಂಬವರು; ಸುಮಾರು ಒಂದು ತಿಂಗಳ ಹಿಂದೆ ತನ್ನ ಗಂಡ ಹಾಗೂ ಮನೆಯವರೊಂದಿಗೆ ಜಗಳವಾಡಿ, ಸಣ್ಣ ಮಗನನ್ನು ಕರೆದುಕೊಂಡು ಆಕೆಯ ತವರು ಮನೆಗೆ ಹೋಗಿದ್ದರು ಎನ್ನಲಾಗಿದೆ.ಮೇ 7ರ ಬೆಳಿಗ್ಗೆತನ್ನ ದೊಡ್ಡ ಮಗನನ್ನು ಕರೆದುಕೊಂಡು ಹೋಗುವ ನೆಪದಲ್ಲಿ ಸಹೋದರನೊಂದಿಗೆ ಮತ್ತೆ ಮೂಡುಕೋಡಿಯಲ್ಲಿರುವ ತನ್ನ ಪತಿಯ ಮನೆಗೆ ಬಂದು ಗಲಾಟೆ ನಡೆಸಿ ಮಾವನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಹಲ್ಲೆಗೊಳಗಾದ ವೆಂಕಟರಮಣ ಭಟ್ ವೇಣೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಸೊಸೆ ವಸಂತ ಯಾನೆ ಮೋಹನಾಕ್ಷಿ ಮತ್ತು ಆಕೆ ಸಹೋದರ ಹೇಮೇಶ ಎಂಬವರು ಮಗನನ್ನು ಕರೆದುಕೊಂಡು ಹೋಗಲು ತವರು ಮನೆಯಿಂದ ಪತಿಯ ಮನೆಗೆ ಬಂದಿದ್ದು ಇದೇ ಸಂದರ್ಭ ಮಾವ ವೆಂಕಟರಮಣ ಭಟ್ ಅವರಲ್ಲಿ ಗಲಾಟೆ ಮಾಡಿ ಅವಾಚ್ಯವಾಗಿ ಬೈಯ್ದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.ಹಲ್ಲೆಯಿಂದ ಗಾಯಗೊಂಡ ವೆಂಕಟರಮಣ ಭಟ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಯುತ್ತಿದೆ.

Latest 5

Related Posts