ಮೇ 15ರಿಂದ ಕರುಂಬಿತ್ತಿಲ್‌ನಲ್ಲಿ ಸಂಗೀತ ಶಿಬಿರ

ಮೇ 15ರಿಂದ ಕರುಂಬಿತ್ತಿಲ್‌ನಲ್ಲಿ ಸಂಗೀತ ಶಿಬಿರ
Facebook
Twitter
LinkedIn
WhatsApp

ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ನಿಡ್ಲೆ ಕರುಂಬಿತ್ತಿಲ್ ಮನೆಯಂಗಳದಲ್ಲಿ 24ನೇ ವರ್ಷದ ‘ಸಂಗೀತ ಶಿಬಿರ’ವು ವರ್ಷಂಪ್ರತಿಯಂತೆ ಈ ವರ್ಷವೂ ಮೇ 15 ರಿಂದ 19ರವರೆಗೆ ನಾಡಿನ ಪ್ರಸಿದ್ಧ ಸಂಗೀತ ಕಲಾವಿದರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಲಿದೆ. ಸಂಗೀತದೊಳಗಿನ ಆಟ, ಲಯದೊಂದಿಗಿನ ಮೋಜು, ಅಭಿನಯ, ಉಪನ್ಯಾಸ ಮತ್ತು ವಿಶೇಷ ಸಂಗೀತ ಕಚೇರಿಗಳನ್ನೊಳಗೊಂಡ ಕರುಂಬಿತ್ತಿಲ್ ಶಿಬಿರ ಮೇ 15ರಂದು ಬೆಳಿಗ್ಗೆ ಧರ್ಮಸ್ಥಳದ ಪ್ರಕಾಶ್ ದೇವಾಡಿಗ ಅವರ ಮಂಗಳ ವಾದ್ಯದೊಂದಿಗೆ ಪ್ರಾರಂಭಗೊಳ್ಳಲಿದೆ. ಉಡುಪಿ ಶ್ರೀ ಕೃಷ್ಣ ಮಠದ ಭಾವಿ ಪರ್ಯಾಯ ಪೀಠಾಧೀಶ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಗಳವರು ಶಿಬಿರವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ಮಠದ ದಿವಾನ ವಿದ್ವಾನ್ ಡಾ. ಉದಯಕುಮಾರ್ ಸರಳತ್ತಾಯ ಅವರು ಪ್ರವಚನ ನೀಡಲಿದ್ದಾರೆ. ಬಳಿಕ ಅಮೇರಿಕಾದ ಡಾ. ರಮೇಶ್ ಶ್ರೀನಿವಾಸನ್ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ ಇಂದಿರಾ ಕಡಂಬಿ ಅವರಿಂದ ಭರತನಾಟ್ಯ; ಟಿ.ವಿ. ರಾಮಪ್ರಸಾದ್, ವಿಠ್ಠಲ್ ರಂಗನ್, ಎಂ.ಎಸ್. ವರದನ್ ಮತ್ತು ಪಯ್ಯನೂರು ಗೋವಿಂದ ಪ್ರಸಾದ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಹಾಗೂ ವಿಷ್ಣು ಆರ್. ಮತ್ತು ತಂಡದವರಿಂದ ನವತಾರ ಕಚೇರಿ ನಡೆಯಲಿದೆ. ಮೇ 16ರಂದು ಬೆಳಿಗ್ಗೆ ನಿಡಸೋಸಿ ಶ್ರೀ ದುರುದುಂಡೀಶ್ವರ ಮಠದ ಶ್ರೀ ನಿಜಲಿಂಗೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಖ್ಯಾತ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ತಂಡದವರಿಂದ ಯಕ್ಷ-ಗಾನ-ವೈಭವ ಪ್ರಸ್ತುತಗೊಳ್ಳಲಿದೆ. ಸಂಜೆ ಚಾರುಮತಿ ರಘುರಾಮನ್ ಮತ್ತು ಅನಂತ ಆರ್. ಕೃಷ್ಣನ್ ಅವರಿಂದ ಬಹುವಿಶೇಷ ದ್ವಂದ್ವ ಕಾರ್ಯಕ್ರಮ ನಡೆಯಲಿದೆ. ಮೇ 18 ರಂದು ಬೆಳಿಗ್ಗೆ ಪಿಟೀಲು ವಿದ್ವಾಂಸ ಎಚ್.ಕೆ. ನರಸಿಂಹಮೂರ್ತಿ ಅವರನ್ನು ಸಮ್ಮಾನಿಸಲಾಗುವುದು. ಬಳಿಕ ಅವರ ತಂಡದಿಂದ ದ್ವಂದ್ವ ಪಿಟೀಲು ವಾದನ, ಸಂಜೆ ಮೈಸೂರು ಚಂದನ್ ಕುಮಾರ್ ಮತ್ತು ತಂಡದಿಂದ ವೀಣಾವಾದನ ಕಾರ್ಯಕ್ರಮ ನಡೆಯಲಿದೆ. ಮೇ 19 ರಂದು ಬೆಳಿಗ್ಗೆ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬಳಿಕ ರಮಣ ಬಾಲಚಂದ್ರನ್ ಮತ್ತು ತಂಡದಿಂದ ವಿಶೇಷ ವೀಣಾವಾದನ ಹಾಗೂ ಸಂಗೀತ ಕಾರ್ಯಕ್ರಮಗಳೊಂದಿಗೆ ಶಿಬಿರ ಸಂಪನ್ನಗೊಳ್ಳಲಿದೆ. ಶಿಬಿರದಲ್ಲಿ ಖ್ಯಾತ ಸಂಗೀತ ದಿಗ್ಗಜರಾದ ಟಿ.ವಿ. ರಾಮಪ್ರಸಾದ್, ವಿಠ್ಠಲ್ ರಂಗನ್, ಎಂ.ಎಸ್. ವರದನ್, ಪಯ್ಯನೂರು ಗೋವಿಂದಪ್ರಸಾದ್, ವೈ.ಜಿ. ಶ್ರೀಲತಾ, ನಿಕ್ಷಿತ್ ಪುತ್ತೂರ್, ಅಭಿಷೇಕ್ ರಘುರಾಂ, ಸುಂದರಕುಮಾರ್, ಎಚ್.ಏನ್. ಭಾಸ್ಕರ್, ಹನುಮಂತಪುರಂ ಭೂವರಾಹಂ, ವಿ.ವಿ. ರಮಣಮೂರ್ತಿ ತಮ್ಮ ಸಂಗೀತ ಕಾರ್ಯಕ್ರಮದ ಮೂಲಕ ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನಡೆಸಲಿದ್ದಾರೆ. ಸಂಗೀತಾಸಕ್ತರು ಹಾಗೂ ವಿದ್ಯಾರ್ಥಿಗಳು ಸಂಗೀತ ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶಿಬಿರದ ಸಂಯೋಜಕ ಕರುಂಬಿತ್ತಿಲ್ ಮನೆಯ ವಿದ್ವಾನ್ ವಿಠ್ಠಲ ರಾಮಮೂರ್ತಿ ಮತ್ತು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest 5

Related Posts