ಬೆಳ್ತಂಗಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಮಾದರಿ ಶಿಲಾನ್ಯಾಸ

ಬೆಳ್ತಂಗಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಮಾದರಿ ಶಿಲಾನ್ಯಾಸ
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕೇಂದ್ರದದಲ್ಲಿ ಕೆಎಸ್‌ಆರ್‌ಟಿಸಿಯ ನೂತನ ಬಸ್ ನಿಲ್ದಾಣ ಕಾಮಗಾರಿಗೆ ಮೇ 17ರಂದು ಭೂಮಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಸದ್ದುಗದ್ದಲವಿಲ್ಲದೇ ವಿದ್ಯುಕ್ತವಾಗಿ ನೆರವೇರಿತು.ಚುನಾವಣಾ ನೀತಿಸಂಹಿತೆ ಜ್ಯಾರಿಯಲ್ಲಿ ಇರುವುದರಿಂದ ಈ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಚಿವ ಶಾಸಕರಾದಿಯಾಗಿ ಜನಪ್ರತಿನಿಧಿಗಳು ಭಾಗವಹಿಸಲಿಲ್ಲ. ಆದ್ದರಿಂದ ಸದ್ರಿ ಕಾಮಗಾರಿಯ ಭೂಮಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಟಾಕಿಯ ಭರಾಟೆ ಇರಲಿಲ್ಲ; ಸಚಿವರ ಹಾಗೂ ಶಾಸಕರುಗಳ ಅದ್ದೂರಿಯ ಮೆರವಣಿಗೆ ಇರಲಿಲ್ಲ; ಬ್ಯಾಂಡ್ ವಾಲಗಗಳ ಸದ್ದೇ ಇರಲಿಲ್ಲ. ಭೂಮಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳುಗಷ್ಟೇ ಸೀಮಿತವಾಗಿತ್ತು. ಸಚಿವರಿಗೆ ಹಾಗೂ ಶಾಸಕರುಗಳಿಗೆ ಬೆದರಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳೂ ಕಾರ್ಯಕ್ರಮದಿಂದ ದೂರವೇ ಉಳಿದರು. ಪರಿಣಾಮವಾಗಿ ಕೋಟ್ಯಾಂತರ ರೂಪಾಯಿ ವೆಚ್ಚದ ಈ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಖರ್ಚಾಗಬಹುದಾಗಿದ್ದ ಲಕ್ಷಾಂತರ ರೂಪಾಯಿ ಕಾಮಗಾರಿಯ ಗುತ್ತಿಗೆದಾರರಿಗೆ ಉಳಿಯಿತು. ಇನ್ನೇನಿದ್ದರೂ ಈ ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣಕ್ಕೆ ಉದ್ಘಾಟನಾ ಭಾಗ್ಯ ಮಾತ್ರ.ಈ ನಡುವೆ ಕಾಮಗಾರಿ ವಿಳಂಬವಾಗದಿರಲು ಸಾಂಪ್ರದಾಯಿಕ ಭೂಮಿಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಮಾಡಿ; ಮುಂದಕ್ಕೆ ಚುನಾವಣಾ ನೀತಿ ಸಂಹಿತೆ ತೆರವಾದ ಬಳಿಕ ಮತ್ತೊಮ್ಮೆ ಅದ್ದೂರಿಯಾಗಿ ಶಿಲಾನ್ಯಾಸ ಕಾರ್ಯಕ್ರಮ ನಡೆಸುವಾ ಎಂದು ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳು ಕಾಮಗಾರಿಯ ಗುತ್ತಿಗೆದಾರರಿಗೆ ಮೌಖಿಕವಾಗಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಒಂದೊಮ್ಮೆ ಇದು ಹೌದಾದಲ್ಲಿ; ಒಂದೇ ಕಾಮಗಾರಿಗೆ ಪುಕ್ಕಟೆ ಪ್ರಚಾರಕ್ಕಾಗಿ ಎರಡನೇ ಬಾರಿ ಭೂಮಿಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿದ ಪಾಪಕ್ಕೆ ಗುರಿಯಾಗುವುದರ ಜೊತೆಗೆ, ರಾಜಕೀಯ ವ್ಯಕ್ತಿಗಳ ಪ್ರಚಾರದ ತೆವಲು ಅನಾವರಣಗೊಳ್ಳಲಿದೆ.

Latest 5

Related Posts