ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ ಭಾರತ ಬೀಡಿ ಕಂಪೆನಿ ಉಳಿಸಲು ನಡೆಸಿದ ಹೋರಾಟ ಯಶಸ್ವಿಯಾಗಿ ಇತ್ಯರ್ಥವಾಯಿತು ಎಂದು ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಅದ್ಯಕ್ಷ ಬಿ.ಎಂ. ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತ ಬೀಡಿ ಕಂಪೆನಿಯನ್ನು ಕಾನೂನು ಬಾಹಿರವಾಗಿ ಸರಕಾರದ ಅನುಮತಿ ಪಡೆಯದೇ ಮುಚ್ಚಲು ನಿರ್ಧರಸಿದ ಬೀಡಿ ಮಾಲಕರ ನಡೆಯನ್ನು ಖಂಡಿಸಿ ‘ಭಾರತ ಬೀಡಿ ಉಳಿಸಿ, ಕಾರ್ಮಿಕರ ಬದುಕು ರಕ್ಷಿಸಿ’ ಎಂಬ ಘೋಷವಾಕ್ಯದೊಂದಿಗೆ ಮೇ 16ರಿಂದ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘ (ಸಿಐಟಿಯು), ಬೆಳ್ತಂಗಡಿ ತಾಲೂಕು ಬೀಡಿ ಗುತ್ತಿಗೆ ಕೆಲಸ ಮಾಡುವವರ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ್ದ ಅನಿರ್ದಿಷ್ಟ ಕಾಲದ ದರಣಿ ಸತ್ಯಾಗ್ರಹ ಯಶಸ್ವಿಯಾಗಿ ಮಾತುಕತೆಯಿಂದ ಅಂತ್ಯಗೊಂಡ ಬಳಿಕ ಬಿ.ಎಂ. ಭಟ್ ಹೇಳಿಕೆಯೊಂದರಲ್ಲಿ ಈ ವಿಚಾರ ತಿಳಿಸಿದರು. ಇಂದು ಮಂಗಳೂರು ಎ.ಎಲ್.ಸಿ. ಕಚೇರಿಯಲ್ಲಿ ಎ.ಎಲ್.ಸಿ. ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾಲಕರ ಮತ್ತು ಕಾರ್ಮಿಕರ ಪ್ರತಿನಿಧಿಗಳ ಹಾಗೂ ಬೀಡಿ ಗುತ್ತಿಗೆದಾರರ ಪ್ರತಿನಿಧಿಗಳ ಜಂಟಿ ಸಭೆ ನಡೆಸಿ ಈ ಭಾರತ ಬೀಡಿ ಕಂಪೆನಿಯನ್ನು ಬೆಳ್ತಂಗಡಿಯಲ್ಲಿ ಮುಚ್ಚದಿರುವ ತೀಮಾನಕ್ಕೆ ಬರಲಾಯಿತು. ಈ ಹೋರಾಟವನ್ನು ಬೆಂಬಲಿಸಿ ಕಂಪೆನಿ ಉಳಿಸಲು ಸಹಕರಿಸಿದ ಕೆ.ಪಿ.ಸಿ.ಸಿ. ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಾಂ, ಬೀಡಿ ಫೆಡರೇಶನ್ ರಾಜದ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಸಯ್ಯದ್ ಮುಜಿಬ್ ಅವರುಗಳಿಗೆ ಕಾರ್ಮಿಕರ ಪರವಾಗಿ ಆತ್ಮೀಯ ಅಭಿನಂದನೆ ಸಲ್ಲಿಸುತ್ತೇವೆ ಎಂದವರು ಹೇಳಿದರು. ಜೊತೆಗೆ ದರಣಿಯಲ್ಲಿ ಭಾಗವಹಿಸಿದ ಕಾರ್ಮಿಕರನ್ನು, ಸಂಘದ ಸದಸ್ಯರನ್ನು ಕೂಡಾ ಅಬಿನಂದಿಸುತ್ತೇವೆ ಎಂದರು. ಜೊತೆಗೆ ಕಂಪೆನಿ ಉಳಿಸಿಲು ಸಹಕರಿಸಿದ ಸಂಬಂದಪಟ್ಟ ಎಲ್ಲಾ ಅದಿಕಾರಿಗಳನ್ನು, ಮಾದ್ಯಮ ಸ್ನೇಹಿತರನ್ನೂ ಅಬಿನಂದಿಸುತ್ತೇವೆ.ಮಾತುಕತೆಯಲ್ಲಿ ಸಂಘದ ಪ್ರತಿನಿಧಿಗಳಾಗಿ ಜೆ. ಬಾಲಕೃಷ್ಣ ಶೆಟ್ಟಿ. ಬಿ.ಎಂ.ಭಟ್, ಈಶ್ವರಿ, ಗುತ್ತಿಗೆದಾರರ ಪ್ರತಿನಿಧಿಗಳಾಗಿ ರವಿ ಪೂಜಾರಿ, ಕೃಷ್ಣಪ್ಪ ಮಂಗಳೂರು, ರಾಧಾಕೃಷ್ಣ ಶೆಟ್ಟಿ, ಗಂಗಾಧರ ಶೆಟ್ಟಿ, ಸಿ. ಮಹಮ್ಮದ್, ಶಿವಾನಂದ ರಾವ್ ಕಕ್ಕೆನೇಜಿ, ರಾಮಯ್ಯ ಗೌಡ ಮಾಚಾರು, ಆನಂದ ಪೂಜಾರಿ, ಅರುಣ, ಮಹಮ್ಮದ್ ಮದ್ದಡ್ಕ, ತುಂಗಪ್ಪ ಬಂಗೇರ, ಸುಂದರ ಪೂಜಾರಿ, ಅತ್ತೂಸ್ ವೇಗಸ್, ಹೊನ್ನಪ್ಪ ಗೌಡ, ಬಾಬು ಪೂಜಾರಿ, ಶಶಿಧರ ಶೆಟ್ಟಿ, ಲಕ್ಷ್ಮಣ ಪರಂಗಿಪೇಟೆ, ಭಾರತ ಬೀಡಿ ಮಾಲಕರ ಪರವಾಗಿ ಸತೀಶ್ ಪೈ ಮತ್ತು ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.






