ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ಮಣ್ಣಿನ ಹರಕೆಯ ಪುಣ್ಯಕ್ಷೇತ್ರ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ದಿ| ಸುಭಾಶ್ಚಂದ್ರ ಸುರ್ಯಗುತ್ತು ಇವರ ಸ್ಮರಣಾರ್ಥ ದಿನಾಂಕ ಜೂನ್ 15ರಂದು ಕ್ಷೇತ್ರದಲ್ಲಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕನ್ಯಾಡಿಯ 1 ರಿಂದ 8 ನೇ ತರಗತಿವರೆಗಿನ ಒಟ್ಟು 70 ಮಕ್ಕಳು ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸುರ್ಯದ 1 ರಿಂದ 5 ನೇ ತರಗತಿವರೆಗಿನ 32 ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಆನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಸತೀಶ್ಚಂದ್ರ ಸುರ್ಯಗುತ್ತು ವಿತರಿಸಿದರು. ಈ ಸಂದರ್ಭದಲ್ಲಿ ಸಂದೀಪಾ ಸತೀಶ್ಚಂದ್ರ, ಸಂಗ್ರಾಮ್ ಎಸ್‌. ಕೃತಿ ಸಂಗ್ರಾಮ್, ಧನಂಜಯ ಅಜ್ರಿ ನಡಗುತ್ತು, ಬಿ. ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ, ಡಾ| ಪ್ರದೀಪ್ ನಾವೂರು, ವಕೀಲರಾದ ಶಶಿಕಿರಣ್ ಜೈನ್, ಸುರ್ಯಗುತ್ತು ಕುಟುಂಬಸ್ಥರು, ಅಧ್ಯಾಪಕರಾದ ಜಯಾ, ಶೋಭಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನೊಣಯ್ಯ ಗೌಡ, ಪದ್ಮಾವತಿ ಸುಕೇಶ್ ಪೂಜಾರಿ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಾಲೆಯ ಪರವಾಗಿ ಅಧ್ಯಾಪಕರಾದ ವಿಕಾಸ್ ಕೃತಜ್ಞತೆಗಳನ್ನು ಸಲ್ಲಿಸಿದರು.

Latest News

Related Posts