ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ಬೀದಿಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ವ್ಯಾಪಾರ ನಿಯಂತ್ರಣ) ನಿಯಮ-2019 ರಂತೆ ಕುಂದುಕೊರತೆ ನಿವಾರಣಾ ಸಮಿತಿ ಸದಸ್ಯರಾಗಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಮಿತಿಯನ್ನು ಸರಕಾರದ ಮಾರ್ಗಸೂಚಿಯಂತೆ ಈ ಕೆಳಗಿನಂತೆ ರಚಿಸಲಾಗುವುದು.ಸಮಿತಿಯ ಅಧ್ಯಕ್ಷರು 65ವರ್ಷ ವಯೋಮಾನದ ಒಳಗಿನ ನಿವೃತ್ತ ಸಿವಿಲ್ ನ್ಯಾಯಾಧೀಶರಾಗಿರಬೇಕು. ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು ಒಬ್ಬರು 65ವರ್ಷ ವಯೋಮಾನದ ಒಳಗಿನ ರಾಜ್ಯ ಸರಕಾರದ ನಿವೃತ್ತ ‘ಎ’ ದರ್ಜೆಯ ಅಧಿಕಾರಿಯಾಗಿರಬೇಕು. ಇತರ ಸ್ಥಾನಗಳಿಗೆ ಅರ್ಜಿ ಸಲ್ಲಿಸುವವರು ಸ್ಥಳೀಯ ಪ್ರದೇಶದ ಕಳಂಕ ರಹಿತ ಸೇವಾ ದಾಖಲೆ ಹೊಂದಿರಬೇಕು; ಸ್ಥಳೀಯ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರದಲ್ಲಿ ಹಾಗೂ ಅನೌಪಚಾರಿಕ ಆರ್ಥಿಕ ಕ್ಷೇತ್ರದಲ್ಲಿ ಅನುಭವ ಹೊಂದಿದ್ದು, ಸಾಮಾಜಿಕ ಕಾರ್ಯಕರ್ತರಾಗಿರಬೇಕು. ವಯಸ್ಸು 65 ವರ್ಷ ಮೀರಿರಬಾರದು.ಸಮಿತಿಯ ಅಧಿಕಾರಾವಧಿ 5ವರ್ಷಗಳಾಗಿದ್ದು, ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗುವ ನಿವೃತ್ತ ಸಿವಿಲ್ ನ್ಯಾಯಾಧೀಶರನ್ನು ಅರೆಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಂಡು,ಅವರಿಗೆ ತಿಂಗಳೊಂದರ ರೂಪಾಯಿ 2,500/- (ಎರಡು ಸಾವಿರದ ಐನೂರು ಮಾತ್ರ)ನ್ನು ಗೌರವಧನವಾಗಿ ನೀಡಲಾಗುವುದು. ಕುಂದುಕೊರತೆ ನಿವಾರಣಾ ಸಮಿತಿಯ ಇತರ ಸದಸ್ಯರನ್ನು ಅರೆಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಂಡು, ಪ್ರತೀ ಬಾರಿಯ ಸಭೆಗೆ ರೂಪಾಯಿ 1,000/- (ರೂಪಾಯಿ ಒಂದು ಸಾವಿರ ಮಾತ್ರ) ವನ್ನು ಸಂದಾಯ ಮಾಡಲಾಗುವುದು. ಅರ್ಜಿ ಸಲ್ಲಿಸಲು ಜೂನ್ 28 ಕೊನೆಯ ದಿನವಾಗಿದ್ದು; ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬೆಳ್ತಂಗಡಿ ಪಟ್ಟಣ ಪಂಚಾಯತ್ ಕಛೇರಿಯಿಂದ ಕಛೇರಿ ವೇಳೆಯಲ್ಲಿ ಪಡೆದುಕೊಳ್ಳಬಹುದು ಎಂದು ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.





