ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಮಹಾಸಭೆ

ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಮಹಾಸಭೆ
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಆಗಸ್ಟ್ 31ರಂದು ಬೆಳ್ತಂಗಡಿ ಸಿವಿಸಿ ಹಾಲ್‌ನಲ್ಲಿ ಜರಗಿತು. ಸಂಘದ ಅಧ್ಯಕ್ಷ ಹೆನ್ರಿ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ; ಸಂಘದ ಸದಸ್ಯರಿಗೆ 25% ಡಿವಿಡೆಂಡ್ ಘೋಷಿಸಿದರು. ಸಂಘವು 2023-24ನೇ ಸಾಲಿನಲ್ಲಿ ಒಟ್ಟು 308ಕೋಟಿ ರೂಪಾಯಿ ವ್ಯವಹಾರ ನಡೆಸಿ ರೂಪಾಯಿ 1.67 ಕೋಟಿ ಲಾಭ ಗಳಿಸಿದೆ. ರೂಪಾಯಿ 89.11ಕೋಟಿ ಠೇವಣಿ ಸಂಗ್ರಹವಾಗಿದೆ. ಸಂಘವು ಒಟ್ಟು 2647 ‘ಎ’ ವರ್ಗದ ಸದಸ್ಯರನ್ನು ಹೊಂದಿದ್ದು ರೂಪಾಯಿ 94 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ ಎಂದು ಅಧ್ಯಕ್ಷ ಹೆನ್ರಿ ಲೋಬೊ ಸಭೆಗೆ ವಿವರ ನೀಡಿದರು.ಸಂಘದ ಸದಸ್ಯರ 22 ಮಕ್ಕಳಿಗೆ ಒಟ್ಟು 1.65 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ನಿವೃತ್ತಿ ಹೊಂದಲಿರುವ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕಿ ಮಲ್ಲಿಕಾ ಮೋನಿಸ್ ಇವರನ್ನು ಸಮ್ಮಾನಿಸಲಾಹಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ , ನಿರ್ದೇಶಕರುಗಳಾದ ಜೇಮ್ಸ್ ಡಿ’ಸೋಜ, ಹೆರಾಲ್ಡ್ ಪಿಂಟೊ, ಜೋಸೆಫ್ ಪೀಟ‌ರ್ ಸಲ್ಡಾನ್ಹಾ, ಅಲ್ಫೋನ್ಸ್ ರೊಡ್ರಿಗಸ್, ವಿನ್ಸೆಂಟ್ ಪ್ರಕಾಶ್ ಪಿಂಟೊ, ತೋಮಸ್ ಆರ್. ನೊರೊನ್ಹಾ, ಪ್ರಸಾದ್ ಪಿಂಟೊ, ರಫಾಯಲ್ ವೇಗಸ್, ಪೌಲಿನ್ ರೇಗೊ, ಪ್ಲಾವಿಯಾ ಡಿ’ಸೋಜಾ, ವಿನಯ್ ಜಾನ್ಸನ್ ಡಿ’ಸೋಜ, ರಿಯೋ ಮೈಕಲ್ ರೊಡ್ರಿಗಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು. ಅಳದಂಗಡಿ ಶಾಖಾ ವ್ಯವಸ್ಥಾಪಕ ಜೆರೋಮ್ ಡಿ’ಸೋಜ, ನಾರಾವಿ ಶಾಖಾ ವ್ಯವಸ್ಥಾಪಕ ವಾಲ್ಟರ್ ಡಿ’ಸೋಜ, ಕೇಂದ್ರ ಕಛೇರಿ ವ್ಯವಸ್ಥಾಪಕಿ ಮಲ್ಲಿಕಾ ಮೊನಿಸ್, ವೇಣೂರು ಶಾಖಾ ವ್ಯವಸ್ಥಾಪಕಿ ಶಾಂತಿ ಸಿ.ಡಿ., ಸಿಬಂದಿಗಳಾದ ಮೀನಾ ಮಿರಾಂದ, ಸುನಿತಾ ಪಾಯ್ಸ್ , ಅಜಯ್ ರೊಡ್ರಿಗಸ್, ವಿಲ್ಫ್ರೆಡ್ ಡಿ’ಸೋಜ, ಲ್ಯಾನ್ಸಿ ಲೋಬೊ, ಜಾನೆಟ್ ಜೆಸ್ವಿಟಾ ಕ್ರಾಸ್ತಾ, ಪ್ರತಿಮಾ ಪ್ಲಾವಿಯಾ ಕ್ರಾಸ್ತಾ, ರಶ್ಮಿ ಲೋಬೊ, ರೋಯಲ್ ಮೋರಸ್, ಜೋಯಲ್ಡಿ’ಸೋಜಾ, ಸೋಹನ್ ವಿಶಾಲ್ ವೇಗಸ್, ಸ್ಟೆಲ್ಲಾ ಲೋಬೊ, ವಿನೋದ್ ಡಿ’ಸೋಜಾ ಸಹಕರಿಸಿದರು. ಅಧ್ಯಕ್ಷ ಹೆನ್ರಿ ಲೋಬೊ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ ವಂದಿಸಿದರು. ನಿರ್ದೇಶಕ ವಿನಯ್ ಜಾನ್ಸನ್ ಡಿ’ಸೋಜ ಕಾರ್ಯಕ್ರಮ. ನಿರೂಪಿಸಿದರು. ಮಹಾಸಭೆಯಲ್ಲಿ ಸ್ಥಾಪಕ ಪ್ರವರ್ತಕ ಪೀಟರ್ ಕ್ಯಾಲಿಸ್ಟ್ ಡಿ’ಸೋಜಾ, ಫ್ರಾಂಕಿ ಡಿ’ಸೋಜಾ, ಲ್ಯಾನ್ಸಿ ಪಿರೇರಾ, ಮಾಜಿ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ , ಮಾಜಿ ಉಪಾಧ್ಯಕ್ಷರುಗಳಾದ ಆಲ್ಫೋನ್ಸ್ ಫ್ರಾಂಕೊ, ಜಾನ್ ಅರ್ವಿನ್ ಡಿ’ಸೋಜಾ, ಆಲ್ಬರ್ಟ್ ಡಿ’ಸೋಜಾ, ಜೋಸೆಫೀನ್ ಪಿಂಟೊ, ಸಿಪ್ರಿಯನ್ ಫೆರ್ನಾಂಡಿಸ್, ಮಾಜಿ ನಿರ್ದೇಶಕರಾದ ಎಲಿಯಾಸ್ ಪಾಯ್ಸ್, ರುಡಾಲ್ಫ್ ಡಿ’ಸೋಜ, ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಂಘದ ಅಭಿವೃದ್ಧಿಗಾಗಿ ಸಂಘದ ಸದಸ್ಯರಾದ ಫಿಲಿಫ್ ರೊಡ್ರಿಗಸ್, ಲ್ಯಾನ್ಸಿ ಎ. ಪಿರೇರಾ, ವಲೇರಿಯನ್ ರೊಡ್ರಿಗಸ್, ಫ್ರಾಂಕಿ ಡಿ’ಸೋಜಾ, ಸಿಪ್ರಿಯನ್ ಫೆರ್ನಾಂಡಿಸ್ ಸಲಹೆ ಸೂಚನೆ ನೀಡಿ ಚರ್ಚಿಸಿದರು.ಸಂಘವು 28ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಈ ಸಂದರ್ಭದಲ್ಲಿ ಸಂಘಕ್ಕೆ ಸ್ವಂತ ಕಟ್ಟಡಕ್ಕೆ ರೂಪಾಯಿ 95ಲಕ್ಷ ವೆಚ್ಚದಲ್ಲಿ ಸ್ಥಳ ಖರೀದಿಸಲಾಗಿದ್ದು, ಇದೀಗ ರೂಪಾಯಿ 1ಕೋಟಿ ವಿನಿಯೋಗಿಸಿ ನೂತನ ಕಟ್ಟಡ ಕಾಮಗಾರಿಯು ಪ್ರಗತಿ ಹಂತದಲ್ಲಿದೆ. ಇದೇ ಬರುವ ಡಿಸೆಂಬರ್ ತಿಂಗಳಲ್ಲಿ ಉದ್ಘಾಟನೆ ಮಾಡುವ ಯೋಚನೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಹೆನ್ರಿ ಲೋಬೊ ಸಭೆಗೆ ಮಾಹಿತಿ ನೀಡಿದರು.

Latest 5

Related Posts