ಕೊಕ್ಕಡ ಪೇಟೆಗೊಂದು ಹೊನ್ನಗರಿ.’ಸ್ವಾಮಿಪ್ರಸಾದ್ ಪ್ಯಾರಡೈಸ್’ ಶುಭಾರಂಭ.

ಕೊಕ್ಕಡ ಪೇಟೆಗೊಂದು ಹೊನ್ನಗರಿ.’ಸ್ವಾಮಿಪ್ರಸಾದ್ ಪ್ಯಾರಡೈಸ್’ ಶುಭಾರಂಭ.
Facebook
Twitter
LinkedIn
WhatsApp

ಬೆಳ್ತಂಗಡಿ: ಅಭಿವೃದ್ಧಿ ಹೊಂದುತ್ತಿರುವ ಕೊಕ್ಕಡ ಪೇಟೆಗೆ ಹೊನ್ನಗರಿಯಂತೆ ತಲೆಎತ್ತಿರುವ ಸುಸಜ್ಜಿತ ಹವಾನಿಯಂತ್ರಿತ ಸಭಾಂಗಣ, ಬಾಲ್ಕನಿಯನ್ನೊಳಗೊಂಡ ವಿಶಾಲ ಕೊಠಡಿಗಳು ಹಾಗೂ ಸವಿರುಚಿಯ ಊಟ-ಉಪಹಾರಗಳ ಹೊಟೇಲ‌ನ್ನು ಒಳಗೊಂಡ ಸ್ವಾಮಿಪ್ರಸಾದ್ ಪ್ಯಾರಡೈಸ್ ವಸತಿಗೃಹ ಮತ್ತು ವಾಣಿಜ್ಯ ಸಂಕೀರ್ಣದ ಉದ್ಭಾಟನಾ ಸಮಾರಂಭವು ಸೆಪ್ಟೆಂಬರ್ 6ರಂದು ಆಮಂತ್ರಿತ ಹಿರಿಯರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸರಳವಾಗಿ ಅಷ್ಟೇ ಸಾಂಪ್ರದಾಯಿಕವಾಗಿ ನೆರವೇರಿತು.ಪ್ಯಾರಡೈಸ್‌ನ ಮಾಲಕರಾದ ಗಿರೀಶ್ ಕುಮಾರ್ ಗೌಡ ಕೆ.ಎಂ.ರ ಮಾತಾಪಿತರಾದ ಶ್ರೀಮತಿ ಲೀಲಾವತಿ ಮತ್ತು ಮಾಯಿಲಪ್ಪ ಗೌಡರು ಆಶೀರ್ವಾದಪೂರ್ವಕವಾಗಿ ದೀಪ ಬೆಳಗಿ ನೂತನ ಪ್ಯಾರಡೈಸ್‌ನ್ನು ಉದ್ಘಾಟಿಸಿದರು. ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ವಿಶ್ವನಾಥ ಶೆಟ್ಟಿ ‘ಶ್ರೀ ಮಾತಾ’, ಮಚ್ಚಿನ ಸೊಸೈಟಿಯ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದುಗ್ಗಪ್ಪ ಗೌಡ, ಪತ್ನಿ ಶಾಂಭವಿ, ಮಾಲಕರ ಕುಟುಂಬಿಕರು ಮತ್ತಿತರರು ಈ ಸರಳ ಸಮಾರಂಭವನ್ನು ಸಾಕ್ಷೀಕರಿಸಿ, ಶುಭ ಹಾರೈಸಿದರು. ಸಂಸ್ಥೆಯ ಮಾಲಕರಾದ ಶ್ರೀಮತಿ ಶೋಭಾ ಮತ್ತು ಗಿರೀಶ್ ಕುಮಾರ್ ಗೌಡ ಕೆ.ಎಂ‌.; ಮಕ್ಕಳಾದ ಜಿ. ಆದರ್ಶ್ ಮತ್ತು ಜಿ. ಅನುಪ್ ಕಾರ್ಯಕ್ರಮ ಸಾಕ್ಷೀಕರಿಸಿದ ಅಭ್ಯಾಗತರನ್ನು ಸ್ವಾಗತಿಸಿ, ಯಥೋಚಿತವಾಗಿ ಸತ್ಕರಿಸಿದರು.

Latest 5

Related Posts